ವಿಜಯನಗರ ವಾಣಿ ಸುದ್ದಿ : ಲಿಂಗಸುಗೂರು
ಮುದಗಲ್ : ಪಟ್ಟಣ ಸಮೀಪದ ಬಯ್ಯಾಪೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ವತಿಯಿಂದ ಕೊರೋನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿದ್ದ ನಿರ್ಗತಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿದರು.
ಕಾರ್ಯಕ್ರಮದ ಕುರಿತು ಮೇಲ್ವಿಚಾರಕ ಹರೀಶ ಮಾತನಾಡಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸಮಾಜದಲ್ಲಿ ಏನಾದರೂ ಹೊಸತೊಂದು ಕೊಡುಗೆ ನೀಡಬೇಕೆನ್ನುವ ಹಂಬಲ, ಕೊರೋನಾ ವೈರಸ್ ಭೀತಿಯಲ್ಲಿದ್ದವರಿಗೆ ಸಾಮಾನ್ಯ ಜನರಿಗೆ ಎದುರಾಗುವ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಬಡ, ಸಾಮಾನ್ಯ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆ ಉಳಿದುಕೊಂಡಿದ್ದಾರೆ. ಕೊರೋನಾ ಕಾಲದಲ್ಲಿ ಅಪಾಯದಲ್ಲಿದ್ದ ನಿರ್ಗತಿಕರಿಗೆ ಈ ಆಹಾರ ಧಾನ್ಯ ದಾರಿ ದೀಪವಾಗಿರಲಿದೆ ನಾವೆಲ್ಲ ಸೇರಿ ಸಂಸ್ಥೆಯೊಂದಿಗೆ ಕೈ ಜೋಡಿಸಿ ಜನರ ನೆರವಿಗೆ ಮುಂದಾಗುವ ಅವಶ್ಯಕತೆ ಇದ್ದು ನಾವೆಲ್ಲ ಸೇರಿ ಸಂಸ್ಥೆಯೊಂದಿಗೆ ಸಹಕರಿಸೋಣ ಎಂದರು.
ಈ ಸಂದರ್ಭದಲ್ಲಿ ಬಯ್ಯಾಪೂರು ಗ್ರಾಮದಮುಖಂಡರಾ ದಸಿದ್ದನಗೌಡ ,ಹನುಮನಗೌಡ ,ಚಂದ್ರು ಗ್ರಾಮ ಪಂಚಾಯತ ಸದಸ್ಯರು ಯೋಜನಾಧಿಕಾರಿ ಮಹೇಶ ಬಯ್ಯಾಪೂರು ಸೇವಾಪ್ರತಿನಿಧಿಗಳು,ಒಕ್ಕೂಟ ಅಧ್ಯಕ್ಷರು ಇದ್ದರು.