ಕೋವಿಡ ಉಚಿತ ಲಸಿಕೆ ಕೊಡಿ ಇಲ್ಲವೇ ಅಧಿಕಾರ ಬಿಡಿ. ಕ.ರ.ವೇ ಯಿಂದ ಸಾಂಕೇತಿಕ ಪ್ರತಿಭಟನೆ.

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ : ಲಿಂಗಸುಗೂರು

 

ಲಿಂಗಸೂಗೂರು  ; ಐತಿಹಾಸಿಕ  ಮುದಗಲ್ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುದಗಲ್ ಘಟಕದ ವತಿಯಿಂದ ಕನ್ನಡದ ಭೀಷ್ಮ, ಎಂಬತ್ತು ಲಕ್ಷಕ್ಕೂ ಅಧಿಕ ಕಾಯ೯ಕತ೯ರಿಗೆ ಕನ್ನಡದ  ದೀಕ್ಷೆಯನ್ನು ನೀಡಿರುವ ಕನಾ೯ಟಕ ರಕ್ಷಣಾ ವೇದಿಕೆಯ ರಾಜ್ಯಾಧೄಕ್ಷರಾದ  ಟಿ.ಎ.ನಾರಾಯಣ ಗೌಡರ ಆದೇಶದ ಮೇರೆಗೆ ಐತಿಹಾಸಿಕ ಮುದಗಲ್ ಪಟ್ಟಣದಲ್ಲಿ ಕ.ರ.ವೇ. ಅಧ್ಯಕ್ಷ ಎಸ್.ಎ.ನಯೀಮ್ ಜುನೈದಿ ಅವರ ನೇತೃತ್ವದಲ್ಲಿ ಕರೋನ ಮಾಹಾಮಾರಿಯ ಸಂಧಿಗ್ದ ಸಮಯದಲ್ಲಿ ಕೇಂದ್ರ ಸಕಾ೯ರದಿಂದ ಕನ್ನಡ ನಾಡಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ವಿಚಾರದಲ್ಲಿ ಆಗುತ್ತಿರುವ ತಾರತಮ್ಯ   ಮತ್ತು ಅನ್ಯಾಯದ ವಿರುದ್ಧ ಒಂದೇ ದಿನ,  ಒಂದೇ ಸಮಯ, ಸಾವಿರ ಪ್ರತಿಭಟನೆ, ಉಚಿತ ಲಸಿಕೆ ಕೊಡಿ ಇಲ್ಲವೇ ಅಧಿಕಾರ ಬಿಡಿ ಎಂಬ ಈ  ಪ್ರತಿಭಟನೆಯಲ್ಲಿ ಸಕಾ೯ರ ರಾಜ್ಯದ ಪ್ರತಿಯೊಬ್ಬ  ನಾಗರಿಕರಿಗೆ ವ್ಯದಕೀಯ ಸೌಲಭ್ಯ ಮತ್ತು ಉಚಿತವಾಗಿ ಲಸಿಕೆಯನ್ನು ಕೊಡ ಬೇಕೆಂದು ಫಲಕಗಳನ್ನು ಕೈಯಲ್ಲಿ ಹಿಡಿದು ಕೊಂಡು ಸಾಂಕೇತಿಕವಾಗಿ ಪ್ರತಿಭಟನೆಯನ್ನು  ಮಾಡಲಾಯಿತು. ಈ ಸಂದರ್ಭದಲ್ಲಿ ಸಾಬು ಹುಸೇನ, ಎಸ್.ಎನ್.ಖಾದ್ರಿ, ನಾಗರಾಜ ನಾಯಕ, ಮಹಾಂತೇಶ ಚೆಟ್ಟರ, ಉಪಸ್ಥಿತರಿದ್ದರು.

Share and Enjoy !

Shares