ವಿಜಯನಗರ ವಾಣಿ ಸುದ್ದಿ : ಮಸ್ಕಿ
ಮಸ್ಕಿ.ಪಟ್ಟಣದ ಶ್ರೀ ಸೋಮನಾಥ ದೇವಾಲಯ ಆವರಣದಲ್ಲಿ ಸದ್ದಿಲ್ಲದೆ ಸುಮಾರು ಹದಿನೈದು ದಿನಗಳಿಂದ ನಿರಂತರವಾಗಿ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಉಚಿತವಾಗಿ ಆಹಾರ ವಿತರಣೆ ಕಾರ್ಯ ಮಾಡುತ್ತಿರುವ ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಸೇವಾಶ್ರಮ ಟ್ರಸ್ಟ್ ನ ಕಾರ್ಯ ನಿಜಕ್ಕೂ ಅಭಿನಂದನೀಯ.
ಸಂಕಷ್ಟದಲ್ಲಿರುವ ಜನತೆಗೆ ಆಹಾರ ಮತ್ತು ನೀರು ಉಚಿತವಾಗಿ ನೀಡಿದರು ಆಶ್ರಮದ ವತಿಯಿಂದ ಇಂದಿಗೆ ಹದಿನೈದು ದಿನಗಳಿಂದ ನೀಡುತ್ತಿದ್ದು 150 ಜನರಿಗೆ ಪ್ರಸಾದ ವಿತರಣೆ ಮಾಡಿದರು .15ನೇ ದಿನದ ಸೇವಾ ದಾನಿಗಳು ಶೀನು,ಅರುಣ್ ಗ್ರಿಲ್ಸ್ ಮಸ್ಕಿ.ಇದೆ ರೀತಿಯಾಗಿ ಪ್ರತಿ ದಿನಾಲೂ ಒಬ್ಬೊಬ್ಬ ದಾನಿಗಳು ಕೈಜೋಡಿಸುತ್ತಿದೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ,
ಇದೇ ಸಂದರ್ಭದಲ್ಲಿ ಸೇವಾಶ್ರಮ ಸಂಚಾಲಕರು ಶ್ರೀ ಸಿದ್ದುಜಿ ಹಾಗೂ ಅನೇಕರು ಉಪಸ್ಥಿತರಿದ್ದು ನೊಂದ ಶ್ರಮಿಕ ವರ್ಗದ ಜನರಿಗೆ ಸಹಾಯ ಹಸ್ತ ಚಾಚಿದ್ದು ಜನರ ಮೆಚ್ಚುಗೆ ಪಾತ್ರವಾಗಿದೆ