ಲಿಂಗಸುಗೂರು ; ಶಾಸಕ ಡಿ ಎಸ್ ಹೂಲಗೇರಿ ಸರಕಾರದ ಕೋವಿಡ್ ನಿಯಮಗಳನ್ನುಉಲ್ಲಂಘನೆ ಮಾಡಿ ಹುಟ್ಟು ಆಚರಣೆ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ರಾಜ್ಯ ಮುಖಂಡ ಸಿದ್ದು ವಾಯ್ ಬಂಡಿ ಆರೋಪಿಸಿದರು
ಶನಿವಾರ ಪಟ್ಟಣಕ್ಕೆ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿ ರಾಜ್ಯ ಸರಕಾರ ಕೋವಿಡ್ -19 ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಇತ್ತಕಡೆ ಲಿಂಗಸಗೂರು ಶಾಸಕ ಡಿ ಎಸ್ ಹೂಲಗೇರಿ ರವರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಹಾಕದೆ ಸರಕಾರದ ಕರೋನ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಬೇರೆ ತಾಲೂಕೂಗಳಲ್ಲಿ ಶಾಸಕರು ಸಂಕಷ್ಟದಲ್ಲಿರುವ ಜನರಿಗಾಗಿ ಸಹಾಯಹಸ್ತಚಾಚಿ ಮಾದರಿ ಯಾದರೆ ನಮ್ಮ ತಾಲೂಕಿನ ಶಾಸಕರು ಅಂತಹ ಕಾರ್ಯ ಮಾಡಲು ಸಾಧ್ಯವಾಗದಿದ್ದರೂ ಕನಿಷ್ಠಪಕ್ಷ
ಜನರಲ್ಲಿ ಕರೋನ ಜಾಗೃತಿ ಮೂಡಿಸುವದು ಬಿಟ್ಟು ತಮ್ಮ ಹುಟ್ಟುಹಬ್ಬದ ನಿಮಿತ್ಯ ಜನರನ್ನು ಗುಂಪು ಗುಂಪಾಗಿ ಸೇರಿಸಿಕೊಂಡು ಆಚರಣೆ ಮಾಡಿಕೊಂಡದ್ದಾರೆ ಇದರಿಂದ ಅವರ ಬೇಜವಾಬ್ದಾರಿ ಎದ್ದು ಕಾಣುತ್ತದೆ.ಶಾಸಕರು ಜನರ ಸೇವೆಗಾಗಿ ಆಯ್ಕೆಯಾಗಿದ್ದಾರೆ ಎನ್ನುವುದನ್ನು ಮರೆತಿದ್ದಾರೆ. ಬರಿ ಪ್ರಚಾರಕ್ಕಾಗಿ ಭೂಮಿ ಪೂಜೆ ಮಾಡಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಗಿಸಲು ವಿಫಲರಾಗಿದ್ದಾರೆ. ಮುದಗಲ್ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುತ್ತಿದ್ದಾರೆ ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನ ವಾಗಿದೆಯೇ ಹೊರೆತು ಜನರಿಗೆ ಕುಡಿಯಲು ಎಂಟು ದಿನಕ್ಕೊಮ್ಮೆ ನೀರು ಬರುತ್ತಿದ್ದು ಜನರ ಗೋಳು ಹೇಳತೀರದ್ದಾಗಿದೆ.
ತಾಲೂಕಿನ ವಿವಿದೆಡೆ ಇಂತಹ ಹಲವು ಸಮಸ್ಯೆಗಳಿದ್ದು ಹೆಸರಿಗೆ ಮಾತ್ರ ಭೋಮಿ ಪೂಜೆ ಮಾಡಿ ಕಾಮಗಾರಿ ಅವಧಿ ಮುಗಿದು ವರ್ಷವಾದರೂ ಕಾಮಗಾರಿ ಪೂರ್ಣ ಗೊಳ್ಳದ ಸ್ಥಿತಿಯಲ್ಲಿದೆ.ಕೆಲವು ಕಾಮಗಾರಿಗಳು ಮುಗಿದರು ಕೂಡ ಶಾಸಕರು ಉದ್ಘಾಟನೆ ಮಾಡಿಲ್ಲ ಕ್ಷೇತ್ರದ ಜನ ಇದನೆಲ್ಲ ನೋಡುತ್ತಿದ್ದರೆ ಅವರೇ ಮುಂದಿನ ದಿನಮಾನಗಳಲ್ಲಿ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದರು.