ಖಾಸಗಿ ಶಾಲಾ ಶಿಕ್ಷಕರುಗಳಿಗೆ ನೆರವಾದ ಬಿಜೆಪಿ ಯುವ ಮುಖಂಡ ಸಂಜೀವ್‌ಕುಮಾರ ಕಂದಗಲ್
ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸುಗೂರು : ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಹಟ್ಟಿ ಚಿನ್ನದಗಣಿ ಅದ್ಯಕ್ಷ, ಮಾಜಿ ಶಾಸಕ ಮಾನಪ್ಪ ವಜ್ಜಲ್‌ರ ಅಭಿಮಾನಿಗಳಿಂದ ಪಟ್ಟಣದ ಶ್ರೀ ಉಟಗನೂರು ಬಸವಲಿಂಗ ತಾತಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಖಾಸಗಿ ಶಾಲಾ ಶಿಕ್ಷಕರುಗಳಿಗೆ ಫುಡ್‌ಕಿಟ್‌ಗಳನ್ನು ವಿತರಿಸಲಾಯಿತು.
ಬಿಜೆಪಿಯುವ ಮುಖಂಡರೂ ಆಗಿರುವ ಶಿಕ್ಷಣ ಸಂಸ್ಥೆಯ ಅದ್ಯಕ್ಷ, ಶಿಕ್ಷಣ ಪ್ರೇಮಿ ಸಂಜೀವಕುಮಾರ ಕಂದಗಲ್ ಸುಮಾರು ೫೦ ಕಿಟ್‌ಗಳನ್ನು ವಿತರಣೆ ಮಾಡಿದ ಮಾತನಾಡುತ್ತಾ, ಲಾಕ್‌ಡೌನ್ ಅವಧಿಯಲ್ಲಿ ಹಲವರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ವಿಶೇಷವಾಗಿ ಖಾಸಗಿ ಶಾಲಾ ಶಿಕ್ಷಕರುಗಳ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಸರಕಾರ ಈಗಾಗಲೇ ಖಾಸಗಿ ಶಾಲಾ ಶಿಕ್ಷಕರಿಗೆ ನೆರವಾಗುವ ನಿಟ್ಟಿನಲ್ಲಿ ೫ ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ನಮ್ಮ ನೆಚ್ಚಿನ ನಾಯಕರುಗಳಾದ ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಹಟ್ಟಿ ಚಿನ್ನದಗಣಿ ಅದ್ಯಕ್ಷ, ಮಾಜಿ ಶಾಸಕ ಮಾನಪ್ಪ ವಜ್ಜಲ್‌ರ ಸಾರ್ಥಕ ಸೇವೆಯನ್ನು ಸ್ಮರಿಸಿಕೊಂಡು ಈ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದೇವೆಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಂತೋಷಕುಮಾರ ಕಡಿವಾಲರ್, ಬಿಜೆಪಿ ಮುಖಂಡರಾದ ಹುಸೇನಪ್ಪ ಕಳ್ಳಿಲಿಂಗಸುಗೂರು, ಶರಣಪ್ಪ ನಾಯಕ, ಸಂಜೀವ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಜಾವೀದ್ ಹುಸೇನ್, ರವಿಚಂದ್ರ ಎನ್., ಶಬ್ಬೀರಸಾಬ, ಶರಣಪ್ಪ, ಫಯಾಜ್, ಕಾಳಿಂಗಪ್ಪ, ವೆಂಕಟೇಶ, ಅಮರೇಶ ಸೇರಿ ಇತರರು ಇದ್ದರು.