ಲಿಂಗಸುಗೂರು :ಹಳ್ಳ ಒತ್ತುವರಿ ಕ್ರಮಕ್ಕೆ ಕರವೇ ಆಗ್ರಹ

 

ವಿಜಯನಗರ ವಾಣಿ ಸುದ್ದಿ : ರಾಯಚೂರು ಜಿಲ್ಲೆ

ಲಿಂಗಸುಗೂರು : ಪಟ್ಟಣದಲ್ಲಿರುವ ಹಳ್ಳ ಸಂಪೂರ್ಣವಾಗಿ ಒತ್ತುವರಿಯಾಗಿದ್ದು, ಸ್ವಚ್ಚತೆ ಮಾಯಾವಾಗಿದೆ ಎಂದು ಕರ್ನಾಟಕ ರಕ್ಷಣೆ ವೇದಿಕೆ (ಪ್ರವೀಣ ಶೆಟ್ಟಿ ಬಣದ) ಕಾರ್ಯಕರ್ತರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

 

ಪಟ್ಟಣದ ಹೃದಯ ಭಾಗಲದಲ್ಲಿರುವ ಹಳ್ಳ ಕಸದ ತೊಟ್ಟಿಯಾಗಿ ದುರ್ನತಾ ಬೀರುತ್ತದೆ. ಲಕ್ಷಿö್ಮಗುಡಿ ಹತ್ತಿರದಿಂದ ಆರಂಭವಾಗವ ಈ ಹಳ್ಳ ಎಸ್‌ಎಲ್‌ವಿ ಲಾಡ್ಜ್ ಮುಂಭಾಗ, ಗುರುಗುಂಟಾ ರಸ್ತೆ, ಸುಣಗಾರ ಓಣಿ, ಸರ್ಕಾರಿ ತೋಟ, ಕರಡಕಲ್ ಹೊರಭಾಗದಿಂದ ಹರಿದು ಹೋಗವು ಹಳ್ಳ ಸಂಪೂರ್ಣ ಕಸದ ತೊಟ್ಟಿಯಾಗಿದೆ ಎಂದು ಆಗ್ರಹಿಸಿದರು.

 

ಹಲವಾರು ಅಂಗಡಿಗಳು, ಮನೆಗಳು, ಮಾಂಸದ ಅಂಗಡಿ, ಹೋಟೆಗಳು ಹೊಂದಿ ಕೊಂಡಿರುತ್ತವೆ, ಈ ಎಲ್ಲಾ ಅಂಗಡಿಗಳು ನಿರುಪಯುಕ್ತ ವಸ್ತುಗಳು ಹಳ್ಳದಲ್ಲಿ ಬಿಸಾಡಲಾಗಿದೆ. ಇದರಿಂದ ಕೊಳಚೆ ನೀರು ಹರಿಯಲು ಸಾಧ್ಯವಾಗದೆ ಅಲ್ಲಿ ನಿಂತು ಅನೈರ್ಮಲ್ಯದ ತಾಣವಾಗಿದೆ. ಹಳ್ಳದ ಅಕ್ಕಪಕ್ಕದ ನಾಲ್ಕೆöÊದು ಬ್ಯಾಂಕ್‌ಗಳು, ಲಾಡ್ಜ್ಗಳು ಸರ್ಕಾರಿ ಜಿಟಿಟಿಸಿ ಕಾಲೇಜು, ೪,೫,೬,೭,೧೧,೧೫,೧೭ ವಾರ್ಡಗಳ ಪರಿಸ್ಥಿತಿ ಅದಗಟ್ಟಿದೆ, ಅಕ್ಕಪಕ್ಕದ ಜಾಲಿಗಿಡಗಳು ಸ್ವಚ್ಚಗೊಳಿಸಿ, ಬ್ಲಿಜಿಂಗ್ ಪೌಡರ್ ಸಿಂಪಡಿಸಿ ನಿವಾಸಿಗಳ ಆರೋಗ್ಯ ಕಾಪಾಡಬೇಕು, ವ್ಯಾಪರಿಗಳು, ನಿವಾಸಿಗಳು ಕಸ ತ್ಯಾಜ್ಯ ಹಾಕದಂತೆ ಎಚ್ಚರಿಕೆ ನೀಡಬೇಕು, ಹಳ್ಳ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

 

ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷ ಅಂಜೆನೇಯ ಭಂಡಾರಿ, ಭೀಮೇಶ ನಾಯಕ, ಭೀಮೇಶ ಎಲ್, ನಾಯಕ, ಮೌನೇಶ ಬಳ್ಳಾಪುರ, ಮೌನುದ್ದಿನ, ರಮೇಶ ಸೇರಿದಂತೆ ಇದ್ದರು.

Share and Enjoy !

Shares