ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ ೬ ಲೀಟರ್ ಕಳ್ಳಬಟ್ಟೆ ಸಾರಾಯಿ, ೮೦ ಲೀಟರ್ ಬೆಲ್ಲದ ಕೊಳೆ ವಶಕ್ಕೆ

Share and Enjoy !

Shares
Listen to this article

ವಿಜಯನಗರ ವಾಣಿ ಕನ್ನಡ ದಿನಪತ್ರಿಕೆ ಸುದ್ದಿ

 

ಲಿಂಗಸುಗೂರು : ಅಬಕಾರಿ ಇಲಾಖೆ ಅಧಿಕಾರಿಗಳು ಲಿಂಗಸೂಗೂರು ವಲಯ ವ್ಯಾಪ್ತಿಯ ಮಸ್ಕಿ ತಾಲೂಕಿನ ಜಕ್ಕೇರಮಡಗು ತಾಂಡ, ಮಾರಲದಿನ್ನಿ ತಾಂಡದಲ್ಲಿ ಸಾಮೂಹಿಕ ಅಬಕಾರಿ ದಾಳಿ ಮಾಡಿ ೬ ಲೀಟರ್ ಕಳ್ಳಬಟ್ಟಿ, ೮೦ ಲೀಟರ್ ಬೆಲ್ಲದ ಕೊಳೆ ವಶಪಡಿಸಿಕೊಂಡರು. 

 

ಅಬಕಾರಿ ಜಂಟಿ ಆಯುಕ್ತರು ಕಲಬುರಗಿ ವಿಭಾಗರವರ ಆದೇಶದಂತೆ ಸಾಮಲವ್ವ ಗಂಡ ಹೊನ್ನಪ್ಪ ಮನೆಯಲ್ಲಿ ೩ ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ ೫೦ ಲೀಟರ್ ಬೆಲ್ಲದ ಕೊಳೆ ದೊರೆತಿದ್ದು, ಅದೇ ರೀತಿ ಮಾರಲದಿನ್ನಿ ತಾಂಡದಲ್ಲಿ ರಾಮಣ್ಣ ತಂದೆ ರಾಮಶಪ್ಪ ಮನೆಯಲ್ಲಿ  ೦೩ ಲೀಟರ್ ಕಳ್ಳಬಟ್ಟಿ ಸಾರಾಯಿ ೩೦ ಲೀಟರ್ ಬೆಲ್ಲದ ಕೊಳೆ ದೊರೆತಿದ್ದು ಒಟ್ಟು ೬ ಲೀಟರ್ ಕಳ್ಳಬಟ್ಟಿ ಸಾರಾಯಿ ಹಾಗೂ ೮೦ ಲೀಟರ್ ಬೆಲ್ಲದ ಕೊಳೆ ವಶಪಡಿಸಿಕೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

 

ದಾಳಿಯಲ್ಲಿ ಅಬಕಾರಿ ಉಪಾಧೀಕ್ಷಕರು ಉಪವಿಭಾಗ ರಾಯಚೂರು, ಮೋನಪ್ಪ ಶೈಲಜಾ ಅಬಕಾರಿ ನಿರೀಕ್ಷಕಿಗಳಾದ ಸರಸ್ವತಿ, ಅಬಕಾರಿ ಉಪನಿರೀಕ್ಷಕರಾದ ಲಿಂಗರಾಜು.  ನಾಗಣ್ಣ, ಮಹಮ್ಮದ್‌ಹುಸೇನ್, ಮುದಗಲ್ ಪಿಎಸ್‌ಐ ಡಾಕೇಶ್ ಪೋಲಿಸ್ ಸಿಬ್ಬಂದಿಗಳಾದ ಮಂಜುನಾಥ, ಮಾಳಿಂಗರಾಯ, ರಾಜೇಂದ್ರ, ದೇವರಾಜ್, ನಾಗರಾಜ್, ಸಂಗಪ್ಪ, ತಿರುಪತಿ, ಮಹಮ್ಮದ ಫಾರಾನ್, ಮಂಜುನಾಥ, ಮಹೇಶ್, ಮಹಮದ್ ಹಫೀಜ್ ಸೇರಿದಂತೆ ಇದ್ದರು.

Share and Enjoy !

Shares