ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು ತಾಲ್ಲೂಕಿನ ಮುದಗಲ್ : ಪಟ್ಟಣದ ಹೊರವಲದಲ್ಲಿರುವ
ಭೈರಪ್ಪನ ದೇವಸ್ಥಾನದಲ್ಲಿ ನಿಧಿಗಳ್ಳರು ಶೋಧ ನಡೆಸಿದ ಘಟನೆ ರವಿವಾರ ರಾತ್ರಿ ನಡೆದಿದೆ.
ಪಟ್ಟಣದ ಹಾಲಭಾವಿ ವೀರಭದ್ರಶ್ವರ ದೇವಸ್ಥಾನದ ಹಿಂದುಗಡೆ ಇರುವ ಭೈರಪನ ದೇವಸ್ಥಾನದಲ್ಲಿ ನಿಧಿ ಆಸೆಗಾಗಿ ಭೈರಪನ ದೇವರ ಮೂರ್ತಿ ಭಗ್ನಗೊಳಿಸಿ ೨ ಅಡಿ ತೆಗ್ಗು ತೆಗೆದು ನಿಧಿ ಶೋಧ ನಡೆಸಿದ್ದಾರೆ.
ಮುದಗಲ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ