ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು ; ಶಿಕ್ಷಣ ಕ್ಷೇತ್ರಕ್ಕೆ ಸರಕಾರ ಹೆಚ್ಚಿನ ಆಧ್ಯತೆ ನೀಡುವ ಮೂಲಕ ಕೋಟಿ ಗಟ್ಟಲೇ ಅನುದಾನವನ್ನು ಬಿಡುಗಡೆ ಮಾಡುತ್ತದೆ, ಆದರೆ, ಕೆಲ ಶಿಕ್ಷಣ ಸಂಸ್ಥೆಗಳ ಭ್ರಷ್ಟಾಚಾರ, ದನದಾಹದಿಂದ ಬಡ ವಿದ್ಯಾರ್ಥಿಗಳು ಪಾಡು ಹಾಗೂ ಪಾಲಕರ ಸ್ಥಿತಿ ಆರ್ಥಿಕವಾಗಿ ಕಷ್ಟಕರ ವಾಗಿದೆ
ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಲಿಂಗಸುಗೂರು ವಿ ಸಿ ಬಿ ಶಿಕ್ಷಣ ಸಂಸ್ಥೆಯಲ್ಲಿ ಆಕ್ರಮವಾಗಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕವನ್ನು ಪಡೆಯಲಾಗುತ್ತಿದೆ. ಪಿ ಯು ಸಿ ವಿದ್ಯಾರ್ಥಿಗಳಿಗೆ ಕನಿಷ್ಠ 35 ಅಂಕಗಳನ್ನು ಪ್ರತಿಯೊಬ್ಬರನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸಬೇಕು. ಹೆಚ್ಚಿನ ಅಂಕಗಳನ್ನು ನಿರೀಕ್ಷೆ ಮಾಡುವ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅಸೈನ್‌ಮೆಂಟ್‌ಗಳನ್ನು ನೀಡ ಬೇಕು. ಆನ್‌ಲೈನ್ ಮೂಲಕವೇ ಮನೆಯಲ್ಲಿ ಕುಳಿತುಕೊಂಡೆ ವಿದ್ಯಾರ್ಥಿ ಅಸೈನ್‌ಮೆಂಟ್ ಬರದು ಆನ್‌ಲೈನ್‌ನಲ್ಲೇ ಅಪ್‌ಲೋಡ್ ಮಾಡಬೇಕೆನ್ನುವ ನಿಯಮ ಇಲಾಖೆ ರೂಪಿಸಿದರು , ಲಿಂಗಸುಗೂರು ಪಟ್ಟಣದ ವಿ.ಸಿ.ಬಿ .ಶಿಕ್ಷಣ ಸಂಸ್ಥೆಯು ಅಕ್ರಮವಾಗಿ ಪ್ರತಿಯೊಬ್ಬ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಯಿಂದ 50 ರೂಪಾಯಿ ಶುಲ್ಕವನ್ನು ಪಡೆದು ಪ್ರಶ್ನೆ ಪತ್ರಿಕೆ ನೀಡುತ್ತಿರುವುದು ಕಂಡುಬಂದಿದೆ.
ಸಾಮಾಜಿಕ ಅಂತರವಿಲ್ಲದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಗುಂಪು ಗುಂಪಾಗಿ ಸೇರಿಸಿ: ಶುಲ್ಕ ವಸೂಲು ಮಾಡಲಾಗುತ್ತಿದೆ. ಕಾಲೇಜಿಗೆ ಯಾವುದೇ ಸರ್ಕ್ಯೂಲರ್ ಬಂದಿಲ್ಲದಿದ್ದರೂ ರಾಜಾ ರೋಷವಾಗಿಯೇ ಹಗಲು ದರೋಡೆಗೆ ಇಳಿದಿರುವ ವಿ.ಸಿ.ಬಿ ಶಿಕ್ಷಣ ಸಂಸ್ಥೆಯ ವಿರುದ್ಧ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು, ದೊಡ್ಡವರ ಶಿಕ್ಷಣ ಸಂಸ್ಥೆಯೆಂದು ಅಧಿಕಾರಿಗಳು ಕ್ರಮಕ್ಕೆ ಹಿಂದೇಟು ಹಾಕಿದ್ದೇ ಆದಲ್ಲಿ, ಕಾಲೇಜು ಮುಂದೆ ಧರಣಿ ಸತ್ಯಾಗ್ರಹ ಮಾಡುವ ಮೂಲಕ ಅಧಿಕಾರಿಗಳ ಹಾಗೂ ಶಿಕ್ಷಣ ಸಂಸ್ಥೆಯ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅದ್ಯೆಕ್ಷ ಜಿಲಾನಿ ಪಾಷಾ ಹಾಗೂ ಕರವೇ ಕಾರ್ಯ ಕರ್ತರು ಲಿಂಗಸುಗೂರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು