ಗಬ್ಬೂರು: ಸಂಕ್ರಾಣಿ ಕಲ್ಲು ಮತ್ತು ಉಸುಕು ಎತ್ತುವ ಸ್ಪರ್ಧೆ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ 

ರಾಯಚೂರು ಜಿಲ್ಲೆ

ದೇವದುರ್ಗ ; ತಾಲ್ಲೂಕಿನ ಗಬ್ಬೂರು ಪಟ್ಟಣದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಬದ ಹಿಂದೆ ಇರುವ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸಂಕ್ರಾಣಿ ಕಲ್ಲು ಮತ್ತು ಉಸುಕು ಎತ್ತುವ ಸ್ಪರ್ಧೆ ಏರ್ಪಡಿಸಿದ್ದು ತಲಾ ಎರಡು ಪಂದ್ಯಗಳಿಗೆ ಪ್ರಥಮ ಬಹುಮಾನವಾಗಿ 10 ತೊಲ ಬೆಳ್ಳಿ ಹಾಗೂ ದ್ವಿತೀಯ ಬಹುಮಾನವಾಗಿ  05 ತೊಲ ಬೆಳ್ಳಿ ನೀಡಲಾಗುವುದು ಎಂದು ಅಮಾಲರ ಸಂಘದ ಪದಾರ್ಥಗಳು ತಿಳಿಸಿದರು.

 

ಪ್ರತಿವರ್ಷದ ವಾಡಿಕೆಯಂತೆ ಈ ವರ್ಷವೂ ಕೂಡ ಗ್ರಾಮದಲ್ಲಿನ ಅಮಾಲರ ಸಂಘದ ಯುವಕರು ಶಕ್ತಿಪ್ರದರ್ಶನಕ್ಕಾಗಿ ಸಂಕ್ರಾಣಿ ಕಲ್ಲು ಮತ್ತು ಉಸುಕು ಎತ್ತುವ ಸ್ಪರ್ಧೆ ಏರ್ಪಡಿಸಿದ್ದು ಆಸಕ್ತಿ ಇರುವ ಜಿಲ್ಲೆಯಲ್ಲಿನ ಸಾರ್ವಜನಿಕರು ಯಾವುದೇ ನಿರ್ಬಂಧಗಳಿಲ್ಲದೆ ಭಾಗವಹಿಸಬಹುದು ಅಲ್ಲದೇ ಈ ಸ್ಪರ್ಧೆಯಲ್ಲಿನ ಸಂಕ್ರಾಣಿ ಕಲ್ಲು ಮತ್ತು ಉಸುಕು ಎತ್ತುವ ಸ್ಪರ್ಧಾರ್ಥಿಗಳಿಗೆ ತಲಾ ಎರಡು ಪಂದ್ಯಗಳಿಗೆ ಪ್ರಥಮ ಬಹುಮಾನವಾಗಿ 10 ತೊಲ ಬೆಳ್ಳಿ ಹಾಗೂ ದ್ವಿತೀಯ ಬಹುಮಾನವಾಗಿ  05 ತೊಲ ಬೆಳ್ಳಿ ನೀಡಲಾಗುವುದು ಎಂದು ಅಮಾಲರ ಸಂಘದ ಪದಾಧಿಕಾರಿಗಳಾದ ಬೂದೆಪ್ಪ ರಾಮದುರ್ಗ ಉಪ್ಪಾರ,ಚಿದಾನಂದ,ಚಂದ್ರಶೇಖರ ಸಿಂಗ್ರಿ,ಚಮಾಣಪ್ಪ ಉಪ್ಪಾರ,ಆದಿಬಸವ ಅವರು ತಿಳಿಸಿದರು.

 

Share and Enjoy !

Shares