ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ದುರಾಡಳಿತದಿಂದ ಮತ್ತೊಮ್ಮೆ ಪ್ರಾದೇಶಿಕ ಪಕ್ಷ ಜೆಡಿಎಸ್ ಆಡಳಿತಕ್ಕೆ ಬರಲಿದೆ : ಜೆಡಿಎಸ್ ಮುಖಂಡ ಶಬ್ಬೀರ್
ಬಳ್ಳಾರಿ ಜಿಲ್ಲೆ
ಕುರುಗೋಡು:ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳ ದುರಾಡಳಿತದಿಂದ ಬೇಸತ್ತಿರುವ ರಾಜ್ಯದ ಮತದಾರರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಬೆಂಬಲಿಸಲಿದ್ದಾರೆ ಎಂದು ಜೆಡಿಎಸ್ ಮುಖಂಡ ಶಬ್ಬೀರ್ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೊಮ್ಮೆ ಎಚ್. ಡಿ. ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿ ರೈತ ಮತ್ತು ಬಡವರ ಪರವಾದ ಆಡಳಿತ ನಡೆಸಲಿದ್ದಾರೆ ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಪರಿಶಿಷ್ಟ ಪಂಗಡದ ನಾಯಕ ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಹೇಳಿತ್ತು, ಅಧಿಕಾರಕ್ಕೆ ಬಂದ ನಂತರ ಅವರನ್ನು ಮೂಲೆ ಗುಂಪು ಮಾಡಿದೆ. ಇಂತಹ ಬೆಳವಣಿಗೆಗಳು ನಡೆದಿರುವುದು ವಿಷಾದಕರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೂ ಪಕ್ಷಗಳಿಗೆ ಯಾವುದೇ ನಾಯಕರು ಸೀಮಿತವಲ್ಲ ಇಂದು ಒಂದು ಪಕ್ಷದಲ್ಲಿ ಇದ್ದವರು ನಾಳೆ ಇನ್ನೊಂದು ಪಕ್ಷದಲ್ಲಿ ಇರಬಹುದು.
ಕಂಪ್ಲಿ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಹವಾ ಅಂತೇನು ಇಲ್ಲ ಈ ಹಿಂದೆ ಕ್ಷೇತ್ರದ ಕುರುಗೋಡು ಭಾಗದ ಬಳ್ಳಾರಿ ಗ್ರಾಮೀಣದಲ್ಲಿದ್ದ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಗೆಲುವು ಸಾಧಿಸಿದೆ.
ಅದಲ್ಲದೆ ಕಂಪ್ಲಿ ಭಾಗದಲ್ಲಿ ಪಕ್ಷೇತರರನ್ನು ಗೆಲ್ಲಿಸಿದೆ. ಹಾಗಾಗಿ ಕ್ಷೇತ್ರದಲ್ಲಿ ಯಾವುದೇ ರಾಷ್ಟ್ರೀಯ ಪಕ್ಷಗಳ ಬಲವಿಲ್ಲ.
ಈ ಹಿಂದೆ ಶ್ರೀರಾಮುಲು ಅವರನ್ನು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನವನ್ನು ತಪ್ಪಿಸಿದೆ ಅಲ್ಲದೆ ಅವರ ಆಪ್ತರ ಮೇಲೆ ಬಿಜೆಪಿ ಪಕ್ಷದ ಮುಖಂಡರಿಂದಲೇ ದೂರು ದಾಖಲಿಸುತ್ತಿದೆ ಈ ಮೂಲಕ ಶ್ರೀರಾಮುಲು ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡುವುದಲ್ಲದೆ ಅವಮಾನಿಸಿದೆ.
ಈ ಘಟನೆಗಳನ್ನು ನೋಡುತ್ತಿದ್ದರೆ ಈ ಹಿಂದೆ ಪ್ರಾದೇಶಿಕತೆ ಬಗ್ಗೆ ಅಭಿಮಾನ ಒಲವು ಇಟ್ಟಂತಹ ಸನ್ಮಾನ್ಯರು “ಬಹುಶಃ” ಅವರ ಆತ್ಮೀಯ ರೊಂದಿಗೆ ಪ್ರಾದೇಶಿಕ ಪಕ್ಷಗಳು ಕಡೆ ತಿರುಗಬಹುದು.
ಹಾಗಾಗಿ ಚುನಾವಣೆಗೆ ಯಾವುದೇ ಪಕ್ಷಗಳ ಅಭ್ಯರ್ಥಿಗಳ ಕೊರತೆ ಇದೆ ಎಂದು ಸಾಮಾನ್ಯವಾಗಿ ಹೇಳಲಾಗುವುದಿಲ್ಲ..
ಬಿಜೆಪಿ ಮತ್ತು ಕಾಂಗ್ರೆಸ್ ದುರಾಡಳಿತದಿಂದ
ಈ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ ಎಂದು ತಿಳಿಸಿದರು.