ವಿಜಯನಗರವಾಣಿ ಸುದ್ದಿ ಲಿಂಗಸುಗೂರು
ರಾಯಚೂರು ಜಿಲ್ಲೆ
ಲಿಂಗಸೂಗೂರು ; ತಾಲ್ಲೂಕಿನ ಮುದಗಲ್ ಪಟ್ಟಣದ ಸಮೀಪದ ಹಲ್ಕಾವಟಗಿ ಗ್ರಾಮದಲ್ಲಿ ಮೇವಿನ ಬಣವೆಯ ಹಸುಗೂಸು ಪತ್ತೆಯಾದ ಘಟನೆ ಬುಧವಾರ ಜರುಗಿದೆ.
ಕನಿ ಕರವಿಲ್ಲದೇ ಗಂಡು ಮಗುವನ್ನ ಬಣವೆಯಲ್ಲಿ ಬಿಸಾಕಿ ಹೋಗಿದ್ದಾರೆ. ಗ್ರಾಮಸ್ಥರು ಬಹಿರ್ದೆಸೆಗೆ ಹೋಗಿದ್ದಾಗ ಮಗುವಿನ ಅಳುವು ಕೇಳಿಸಿದೆ. ಹುಲ್ಲಿನಲ್ಲಿ ಬಿದ್ದ ನವಜಾತ ಶಿಶುವನ್ನು ಗ್ರಾಮದವರು ತಂದು ಆರೈಕೆ ಮಾಡಿದರು. ಗ್ರಾಮಸ್ಥರು ನವಜಾತ ಶಿಶು ಸಿಕ್ಕ ಬಗ್ಗೆ ಲಿಂಗಸುಗೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ಮುದಗಲ್ ಠಾಣೆಗೆ ಪೊಲೀಸರು ಮಾಹಿತಿ ನೀಡಿದರು.
ಮುದಗಲ್ ಸಮುದಾಯ ಆರೋಗ್ಯ ಕೇಂದ್ರದ 108 ವಾಹನದಲ್ಲಿ ನವಜಾತ ಶಿಶುವನ್ನು ಲಿಂಗಸುಗೂರು ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಿದರು. ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತೇವೆ. ಶಿಶುವಿನ ಆರೋಗ್ಯದ ಸ್ಥಿತಿಗತಿ ನೋಡಿಕೊಂಡು, ನಂತರ ಬಳ್ಳಾರಿ ಶಿಶುಪಾಲನ ಕೇಂದ್ರಕ್ಕೆ ಕಳಿಸಿಕೊಡಲಾಗುವುದು ಎಂದು ಶಿಶು ಅಭಿವೃದ್ಧಿ ಅಧಿಕಾರಿ ಶರಣಮ್ಮ ಕಾರನೂರು ತಿಳಿಸಿದರು.
ಸ್ಥಳಕ್ಕೆ ಶಿಶು ಅಭಿವೃದ್ಧಿ ಅಧಿಕಾರಿ ಶರಣಮ್ಮ ಕಾರನೂರು, ಅಂಗನವಾಡಿ ಮೇಲ್ವಿಚಾರಕಿ ನೀಲಮ್ಮ ಕಂಬಿ, ರೇಣುಕಾ ಮಡಿವಾಳರ್ ಹಾಗೂ ಅಂಗನವಾಡಿ ಕಾರ್ಯಕರ್ತರು ಇದ್ದರು .