ವಿಜಯನಗರವಾಣಿ ಸುದ್ದಿ, ಹಗರಿಬೊಮ್ಮನಹಳ್ಳಿ :
ಭಾರಿ ಮಳೆಯಿಂದಾಗಿ ಹಂಪಸಾಗರದ ಕಾಲ್ವಿ ಗ್ರಾಮದ ಬಳಿ ಇರುವ ಹಳ್ಳ ತುಂಬಿ ನೀರು ಹರಿಯುತ್ತಿರುವಾಗ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಕೊಚ್ಚಿಹೋಗಿರುವ ದುರ್ಘಟನೆ ನಡೆದಿದೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ-ಮುತ್ಕೂರು ಗ್ರಾಮದ ನಿವಾಸಿಗಳಾದ ಮಲ್ಲಿಕಾರ್ಜುನ (55) ಹಾಗೂ ಸುಮಂಗಳಮ್ಮ(48) ಸಾವಿನಲ್ಲೂ ಒಂದಾದ ದಂಪತಿಯಾಗಿದ್ದಾರೆ. ಇಬ್ಬರೂ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ತಳಕಲ್ ಗ್ರಾಮಕ್ಕೆ ಹೋಗಿದ್ದರು. ಮಂಗಳವಾರ ಮುತ್ಕೂರು ಗ್ರಾಮಕ್ಕೆ ವಾಪಾಸಾಗುವ ವೇಳೆ ಬೈಕ್ ಸಮೇತ ಹಳ್ಳ ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ಬುಧವಾರ ಬೆಳಗಿನ ಜಾವ ಪತಿಯ ಮೃತದೇಹ ಪತ್ತೆಯಾಗಿದ್ದು. ನಂತರ ಪೊಲೀಸರ ಶೋಧಕಾರ್ಯದಿಂದ ಪತ್ನಿಯ ದೇಹ ಪತ್ತೆಯಾಗಿದೆ. ಮೃತ ದಂಪತಿಗೆ ಓರ್ವ ಪುತ್ರನಿದ್ದು, ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.