ಬಳ್ಳಾರಿ ಜಿಲ್ಲೆ
ಸಿರುಗುಪ್ಪ :
ಜು.೧೯ ಮತ್ತು ೨೨ ರಂದು ನಡೆಯುವ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯನ್ನು ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದೆ ಸಕಲ ಸಿದ್ಧತೆ ಮಾಡಿಕೊಂಡು ನಡೆಸಬೇಕೆಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದರು.
ನಗರದ ಸರ್ಕಾರಿ ಪ್ರೌಢ ಶಾಲಾ ಸಭಾಂಗಣದಲ್ಲಿ ೨೦೨೧ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಹಾಗೂ ಮಾರ್ಗಾಧಿಕಾರಿಗಳಿಗೆ ಏರ್ಪಡಿಸಿದ್ದ ಪರೀಕ್ಷಾ ಸಿದ್ದತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಕಡಿಮೆಯಾಗುತ್ತಿದ್ದು, ಮೂರನೇ ಅಲೆಯ ಸೊಂಕು ವಿದ್ಯಾರ್ಥಿಗಳಿಗೆ ಸೋಕದಂತೆ ಎಚ್ಚರವಹಿಸಬೇಕು, ಪರೀಕ್ಷೆ ನಡೆಯುವ ಪ್ರದೇಶದ ಸುತ್ತ ೧೪೪ ಸೆಕ್ಸ್ನ ಜಾರಿಗೊಳಿಸಬೇಕು, ಸರ್ಕಾರದ ಆದೇಶದ ಅನ್ವಯ ಕೊರೊನಾ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು, ಯಾವುದೇ ಅಡ್ಡಿ ಅಂತಕಗಳಿಲ್ಲದಂತೆ ಪರೀಕ್ಷೆ ನಡೆಸಿ ತಾಲೂಕಿನಲ್ಲಿ ಉತ್ತಮ ಫಲಿತಾಂಶ ಬರುವಂತೆ ಕಾರ್ಯನಿರ್ವಹಿಸಬೇಕೆಂದು ಹೇಳಿದರು.
ಬಿ.ಇ.ಒ. ಪಿ.ಡಿ.ಭಜಂತ್ರಿ ಮಾತನಾಡಿ ಜು.೧೯ ಮತ್ತು ೨೨ರಂದು ನಡೆಯುವ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗೆ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದ್ದು, ತಾಲೂಕಿನಲ್ಲಿ ಒಟ್ಟು ೨೬ ಪರೀಕ್ಷಾ ಕೇಂದ್ರಗಳಲ್ಲಿ ೨೨೬೫ ವಿದ್ಯಾರ್ಥಿಗಳು. ೧೮೦೭ ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು ೪೦೭೨ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ, ೮ ಮಾರ್ಗಗಳ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸಲಾಗುತ್ತದೆ.
ಪರೀಕ್ಷಾ ಕಾರ್ಯದಲ್ಲಿ ಮುಖ್ಯ ಅಧೀಕ್ಷಕರಾಗಿ ೨೬ಜನ, ಕಸ್ಟೋಡಿಯನ್ ಆಗಿ ೨೬ಜನ, ಮೊಬೈಲ್ ಸ್ವಾಧೀನಾಧಿಕಾರಿಗಳು ೨೬ಜನ, ಸ್ಥಾನಿಕ ಜಾಗೃತ ದಳದಲ್ಲಿ ೨೬ಜನ, ದೈಹಿಕ ಶಿಕ್ಷಕರು ೨೬ಜನ, ಸ್ಕೌಟ್ಸ್ ಮತ್ತು ಗೈಡ್ಸ್ನ ೭೮ಜನ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳ ಆರೋಗ್ಯ ಪರೀಕ್ಷೆಗಾಗಿ ೩೦ ಥರ್ಮಲ್ ಸ್ಕಾö್ಯನರ್ ಲಭ್ಯವಿರುತ್ತವೆ, ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು ೩೪೬ ಕೊಠಡಿಗಳನ್ನು ಗುರುತಿಸಲಾಗಿದ್ದು, ಒಟ್ಟು ೩೦೩೫ ಡೆಸ್ಕ್ಗಳ ವ್ಯವಸ್ಥೆ ಮಾಡಲಾಗಿದೆ, ಅಲ್ಲದೆ ೨೬ ವಿಶೇಷ ಕೊಠಡಿಗಳು ಮತ್ತು ೨ ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಸಲಾಗಿದ್ದು, ಹೊರರಾಜ್ಯದಿಂದ ಪರೀಕ್ಷೆ ಬರೆಯಲು ೧೯ ವಿದ್ಯಾರ್ಥಿಗಳು ನೊಂದಾಯಿಸಿದ್ದಾರೆ.
ಪರಿಕ್ಷಾ ಸಿಬ್ಬಂದಿಯಲ್ಲಿ ೬೨೧ಜನಕ್ಕೆ ಕೋವಿಡ್ ಲಸಿಕೆಯನ್ನು ಹಾಕಿಸಲಾಗಿದೆ, ಇನ್ನೂ ೧೬ಜನ ಸಿಬ್ಬಂಧಿಗೆ ಕೋವಿಡ್ ಲಸಿಕೆ ಹಾಕಿಸುವ ಕಾರ್ಯ ಬಾಕಿ ಇದೆ., ನಮ್ಮ ಕಛೇರಿಯಿಂದ ೨೦೦೦ ಮತ್ತು ತಾಲೂಕು ಸ್ಕೌಟ್ ಮತ್ತು ಗೈಡ್ಸ್ ಘಟಕದಿಂದ ೩೦೦೦ ಮಾಸ್ಕ್ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬಿ.ಆರ್.ಸಿ ಚಾಗಪ್ಪ, ಉಪಪ್ರಾಚಾರ್ಯ ಪಂಪಾಪತಿಗೌಡ, ದೈಹಿಕ ಶೈಕ್ಷಣ ಪರಿವೀಕ್ಷಕ ಖಾದರ್ ರಹೆಮತ್ತ್ಉಲ್ಲಾ, ಎಸ್.ಎಸ್.ಎಲ್.ಸಿ ಪರೀಕ್ಷೆ ನೋಡಲ್ ಅಧಿಕಾರಿ ಚೆನ್ನಬಸವನಗೌಡ, ಶಿಕ್ಷಕರಾದ ವಿಜಯ ರಂಗರೆಡ್ಡಿ, ಎಂ.ಸುರೇಶ ಇದ್ದರು.