ಲಿಂಗಸಗೂರು ಸರ್ಕಾರಿ ಆಸ್ಪತ್ರೆಯ ಕಾಂಪೌಂಡ್ ಪಕ್ಕದ ಹಸುಗೂಸಿನ ಮೃತದೇಹ ಪತ್ತೆ

Share and Enjoy !

Shares
Listen to this article

ಕಸದ ರಾಶಿಯಲಿ ಹಸುಗೂಸಿನ ಮೃತದೇಹ ,ಹರಿದು ತಿನ್ನುತ್ತಿದ್ದ  ನಾಯಿ ಹಂದಿಗಳು 

 

ಲಿಂಗಸೂಗೂರು  ; ಕಸದ ರಾಶಿಯಲಿ ಹಸುಗೂಸಿನ ಮೃತದೇಹ  ,ಹರಿದು ತಿನ್ನುತ್ತಿದ್ದ ನಾಯಿ ಹಂದಿಗಳು ಪಟ್ಟಣದ ಸರಕಾರಿ ಆಸ್ಪತ್ರೆ ಯ ಪಕ್ಕದ ಕಸದ ರಾಶಿಯಲಿ ಹಸುಗೂಸಿನ ಮೃತದೇಹ ಕಂಡು ಬಂದಿದ್ದು ಮಗುವಿನ ದೇಹವನ್ನು ನಾಯಿ ಹಂದಿಗಳು ಹರಿದು ತಿಂದು ಹಾಕಿವೆ.ಎರಡು ದಿನದ ಹಿಂದೆ ತಾಲೂಕಿನ  ಹಲಕಟಗ್ಗಿ ಗ್ರಾಮದಲ್ಲಿ  ಬಣ ವಿಯಲ್ಲಿ ಜೀವಂತ ಹಸುಗೂಸು ದೊರಕಿರುವ ಘಟನೆ  ಎರಡು  ದಿನಗಳು ಆಗಿಲ್ಲಾ   ಇಂದು ಪಟ್ಟಣದ ಸರಕಾರಿ ಆಸ್ಪತ್ರೆ ಯ ಪಕ್ಕದಲಿಯೆ ಆಗತಾನೆ ಜನಿಸಿದ ಮಗುವಿನ ಮೃತದೇಹ ಕಸದ ರಾಶಿಯಲಿ ದೊರಕಿರುವುದು ಅಮಾನವೀಯ ಘಟನೆಯಾಗಿದೆ

ಮಗುವನ್ನು ಯಾರಾದರು ಎಸೆದು ಹೋಗಿರುವರೊ ಏನೊ ಸದ್ಯಕ್ಕೆ ತಿಳಿಯದಾಗಿದೆ

ಕಸದ ರಾಶಿಯಲಿರುವ ಮೃತ ಮಗುವಿನ ದೇಹವನ್ನು ಪ್ರಾಣಿಗಳು ಕಚ್ಚಿತಿಂದ ದೃಶ್ಯ ವನ್ನು  ಜನತೆ ಆಶ್ಚರ್ಯ ಚಕಿತರಾಗಿ ನೋಡುತ್ತಾ ಹೆತ್ತು ಎಸೆದು ಹೋಗಿರುವವರ ಬಗೆಗೆ ಹಿಡಿ ಶಾಪಹಾಕುತ್ತಿರುವುದು ಕಂಡು ಬಂದಿದೆ 

ಟಿಪ್ಪುಸುಲ್ತಾನ್  ಸಂಘದ  ಲಿಂಗಸುಗೂರ ತಾಲ್ಲೂಕು ಅದ್ಯೆಕ್ಷ ರಾದ   ಅಲ್ಲಾ ಭಕ್ಷ ಮಾನಿಯಾರ  ಮಾತನಾಡಿ  

ಇತಂಹ ಘಟನೆಗಳು ಜನಬಿಡು ಪ್ರದೇಶದಲ್ಲಿ ನೆಡೆದಿರುವುದು  ಹಾಗೆ ಸರ್ಕಾರಿ ಆಸ್ಪತ್ರೆಯ ತಾಲ್ಲೂಕು ಆರೋಗ್ಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ  ಕೊಡಲೇ ಇತಂಹ  ಘಟನೆಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲಾದಿದ್ದಾರೆ  ಮುಂದಿನ ದಿನಗಳಲ್ಲಿ  ಸರ್ಕಾರಿ ಆಸ್ಪತ್ರೆಯ ಎದುರಿಗೆ ಪ್ರತಿಭಟನೆ  ಮಾಡಲಾಗುವುದು ಎಂದು ಹೇಳಿದರು

 

Share and Enjoy !

Shares