ವಿಜಯನಗರವಾಣಿ ಸುದ್ದಿ ರಾಯಚೂರು
ಲಿಂಗಸೂಗೂರು ; ತಾಲ್ಲೂಕಿನ ಮುದಗಲ್ ವಾರ್ಡ್ ನ ಪ್ರತಿಯೊಂದು ಸಮಸ್ಯೆಗಳ ಬಗ್ಗೆ ಸ್ಪಂದಿಸದ ಪುರಸಭೆ ಇಂಜಿನೀಯರ್ ಮಂಹೇಂದ್ರ ಬಡಿಗೇರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯೆ ಮಹಾಲಕ್ಷ್ಮಿ ಕರಿಯಪ್ಪ ಯಾದವ ಒತ್ತಾಯ ಮಾಡಿದರು,
ನಮ್ಮ ವಾರ್ಡ್ ನ ಮಹಿಳೆಯರ ಹೈಟೆಕ್ ಶೌಚಾಲಯ ಕಾಮಗಾರಿಯ ಇಂಜೀನಿಯರ್ ಬಿಲ್ ಮಾಡದ ಹಿನ್ನಲೆಯಲ್ಲಿ ಅರ್ಧಕ್ಕೆ ನಿಂತಿತ್ತು ಶೌಚಾಲಯ ಇಲ್ಲದೆ ಮಹಿಳೆಯರಿಗೆ ತುಂಬಾ ತೊಂದರೆಯಾಗಿದೆ. ಸದಸ್ಯರು ಮಾಹಿತಿ ಕೇಳಿದರೆ ಕೊಡುತ್ತಿಲ್ಲ ಲಂಚ ಕೊಟ್ಟವರಿಗೆ ಮಾತ್ರ ಬಿಲ್ ಮಾಡುತ್ತಾನೆ ಹಾಗೂ ಲಾಕ್ ಡೌನ್ ವೇಳೆ ಪಟ್ಟಣದ ವಾರ್ಡ್ ಗಳಲ್ಲಿ ಹಾಕಿದ ಬ್ಯಾರಿಕೇಟ್ ಬಿಲ್ಲ್ ಗಳ ಬಗ್ಗೆ ಕೂಡಾ ಮಾಹಿತಿ ನೀಡುತ್ತಿಲ್ಲ ಬೇರೆ ವಾರ್ಡ್ ಗಳಲ್ಲಿ ಜಂಗಲ್ ಕಟಿಂಗ್ ಗಾಗಿ 5 ರಿಂದ 10 ಸಾವಿರ ಬಿಲ್ಲ್ ಮಾಡುತ್ತಾರೆ ಬಿಲ್ಲ್ ಗಳ ಪಾವತಿಯಲ್ಲಿ ಕೂಡಾ ಪಕ್ಷ ಭೇದ ಮಾಡುತ್ತಾನೆ, ನಮ್ಮ ವಾರ್ಡ್ ಗೆ ಅನುದಾನ ನೀಡುವಲ್ಲಿ ಮಲತಾಯಿ ಧೋರಣೆ ತೋರುತ್ತಾರೆ ಸಮಸ್ಯೆಗಳನ್ನು ಹೇಳಿದರೆ ಮಹಿಳೆ ಸದಸ್ಯೆ ಎನ್ನುವ ಕಾರಣಕ್ಕೆ ಸಂಪೂರ್ಣ ನಿರ್ಲಕ್ಷ ಮಾಡಿದ್ದಾರೆ, ಹಾಗೂ ಜಯಂತಿ ಬಿಲ್ಲಗಳ ಬಗ್ಗೆ ಭಾರಿ ಗಾತ್ರದ ವಾಹನ ತಡೆಗಟ್ಟುವ ಬ್ಯಾರಿಕೇಡ್ ಟೆಂಡರ್ ಕರೆಯದೆ ಕಾಮಗಾರಿ ಮಾಡಿದ್ದು ಮಾಹಿತಿ ಕೇಳಿದರೆ ಕೊಡುತ್ತಿಲ್ಲ ಕೂಡಲೇ ಈ ಪುರಸಭೆ ಇಂಜನಿಯರ್ ಮಂಹೇಂದ್ರ ಬಡಿಗೇರ ವಿರುದ್ಧ ಮಾನ್ಯ ರಾಯಚೂರು ಜಿಲ್ಲಾಧಿಕಾರಿಗಳು ಹಾಗೂ ಲಿಂಗಸುಗೂರು ಸಹಾಯಕ ಆಯುಕ್ತರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯೆ ಮಹಾಲಕ್ಷ್ಮಿ ಕರಿಯಪ್ಪ ಯಾದವ ಒತ್ತಾಯ ಮಾಡಿದರು.