ಪ್ರಾಜೆಕ್ಟ್ ಹೋಪ್ ಎಮರ್ಜೆನ್ಸಿ ರೆಸ್ಪಾನ್ಸ್ ಚೈಲ್ಡ್ ಫಂಡ್ ಸಹಯೋಗದೊಂದಿಗೆ ಆಶಾ ಮತ್ತು ‌ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯ ಮೇಡಿಕಲ್ ಕೀಟ್ ವಿತರಣೆ…

ವಿಜಯನಗರ ವಾಣಿ ಸುದ್ದಿ ರಾಯಚೂರು

ದೇವದುರ್ಗ:-  ತಾಲೂಕಿನ 08 ಪ್ರಾಥಮಿಕ ಆರೋಗ್ಯ ಕೇಂದ್ರದ 229 ಆಶಾ ಕಾರ್ಯಕರ್ತೆಯರಿಗೆ  85 ಎ ಎನ್ ಎಂ ಮತ್ತು ಇತರೆ ಆರೋಗ್ಯ ಅಧಿಕಾರಿಗಳಿಗೆ ಮತ್ತು ‌ 141 ಅಂಗನವಾಡಿ ಕಾರ್ಯಕರ್ತೆಯರಿಗೆ   ಜುಲೈ 10 ಶನಿವಾರದಂದು ದೇವದುರ್ಗ ತಾಲೂಕಿನ ಆಯಾ  ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಕೋವಿಡ ಲಸಿಕೆ ಜಾಗೃತಿ ಮತ್ತು ಲಸಿಕೆ ಅಭಿಯಾನ ಲಸಿಕೆ ಮಹತ್ವ ಕುರಿತು ತರಬೇತಿಯನ್ನು ಮಾಡುವುದರ ಮುಖಾಂತರ  ,ಆಶಾ ಮತ್ತು ಅಂಗನವಾಡಿ ಹಾಗೂ ಎ ಎನ್ ಎಮ್‌ಗಳಿಗೆ ಅವಶ್ಯಕ ಇರುವ  ಕೋವಿಡ ಅಗತ್ಯ ಮೆಡಿಕಲ್ ಕಿಟ್ಗಳನ್ನು  ವಿತರಣೆಗಳು ಕಾರ್ಯಕ್ರಮವು  ಸಂಬಂಧಪಟ್ಟ  ಪ್ರಾಥಮೀಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಸಹಯೋಗದೊಂದಿಗೆ ನಡೆಯಿತು.

.ಇನ್ನೂ ಆಶಾಕಾರ್ಯಕರ್ತೆ ಮತ್ತು ಅಂಗನವಾಡಿ ಕಾರ್ಯಕರ್ತರ  ಹಾಗೂ ಎ ಎನ್ ಎಂ ಗಳಿಗೆ ಶನಿವಾರದಂದು  ಆಯಾ ಪ್ರಾಥಮಿಕ ಆರೋಗ್ಯಗಳಿಗೆ ವಿತರಿಸಿದ ಕಿಟ್ ನಲ್ಲಿ . ಒಂದು ಸೇಟ್ .PPE  ಕೀಟ್, ಒಂದು ಪಲ್ಸ್ ಆಕ್ಸಿ ಮೀಟರ್,ಐದು  N95 ಮಾಸ್ಕ್ , ಒಂದು ಡಿಜಿಟಲ್ ತರ್ಮಾ ಮೀಟರ್, ಐದು ಫೆಸ್ ಶೀಲ್ಡ್ ಮಾಸ್ಕ್ ಒಳಗೊಂಡಿರುವ ಅಗತ್ಯ ಮೆಡಿಕಲ್ ಕಿಟ್ಗಳನ್ನು  ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತರು ಮತ್ತು ಎ ಎನ್ ಎಂ ಮತ್ತು 141 ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಲಾಯಿತು  ಎಂದು ಚೈಲ್ಡ್ ಫಂಡ್ ಸಂಸ್ಥೆಯ ಪ್ರೊಜೆಕ್ಟ್ ಆಫೀಸರ್ ಅನಿಲಕುಮಾರ ತಿಳಿಸಿದರು.

ಚೈಲ್ಡ್ ಫಂಡ್ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ತಮಗೆ ಒಪ್ಪಿಸಿದ ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕಾ ಅಭಿಯಾನ ಮತ್ತು ಜಾಗೃತಿ ತರಬೇತಿ ಕಾರ್ಯಾಗಾರ ಮತ್ತು ಮೆಡಿಕಲ್ ಕಿಟ್ ವಿತರಣೆ ಕಾರ್ಯಕ್ರಮ ಸುವ್ಯವಸ್ತಿತವಾಗಿ ನಡೆಯುವಂತೆ ನೋಡಿಕೊಂಡರು.

1. ಕೊಪ್ಪರ PHC ಚನ್ನಬಸವ ಬಸವಲಿಂಗಯ್ಯ

2. ಗಬ್ಬೂರ  PHC ಶೋಭಾ ಮತ್ತು ಇಬ್ರಾಹಿಂ

3. ಚಿಂಚೋಡಿ PHC ಶಮ್ ಶಾದ್ ಬೇಗಂ ಖಾಜಾ ಹುಸೇನ್

4. ಗಲಗ PHC ಬಾಳಪ್ಪ ಸಲೀಂಸಾಬ್ ಆಂಜನೇಯ ಮರಕಮ್ ದಿನ್ನಿ

5. ಮಸರಕಲ್ PHC ರಾಜೇಶ್ವರಿ ಹಿರೇಮಠ್, ಆಂಜನೇಯ ಮಲದಕಲ.

ಇನ್ನು ಉಳಿದ ತಾಲೂಕಿನ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ತರಬೇತಿ  ನಡೆಯುವುದು ಎಂದು ಎಂದು ಹೇಳಿದರು …

 

Share and Enjoy !

Shares