ವಿಜಯನಗರವಾಣಿ ಸುದ್ದಿ
ಹಟ್ಟಿ ಚಿನ್ನದ ಗಣಿ:ಪಟ್ಣದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಂಪೌಂಡ್ ವಾಲ್ ಅಂತ್ಯತ ಕಳಪೆ ಕಾಮಗಾರಿಯೆಂದು ಅಂಬೇಡ್ಕರ್ ಸೇನೆ ಆರೋಪ.
ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಂಪೌಂಡ್ ನಿರ್ಮಾಣಕ್ಕೆ 19-20ನೇ ಡಿ.ಎಮ್.ಎಫ್ ಅನುದಾನದಲ್ಲಿ 13,41,305.84 ಲಕ್ಷ ರೂ ಮಂಜೂರು ಮಾಡಿದ ಕಾಂಪೌಂಡ್ ವಾಲ್ ಕಾಮಗಾರಿ ಹಾಗೂ ಸದರಿ ಆರೋಗ್ಯ ಕೇಂದ್ರದ ಉಪಯೂಕ್ತವಾದ ಕಾಂಪೌಂಡ್ ಗೊಡೆಯನ್ನು ನೆಲಸಮ ಗೋಳಿಸಿದ್ದಾರೆ. ಹೊಸ ಕಾಂಪೌಂಡ್ ಕಾಮಗಾರಿ ಆರಂಭಿಸಿದ್ದಾಗ ಹಳೆಯ ಕಾಂಪೌಂಡ್ ತಳಪಾಯದ ಮೇಲೆ ಪುನರ್ ನಿರ್ಮಾಣಕ್ಕೆ ಮುಂದಾಗಿ ಗುತ್ತಿಗೆದಾರ ಹಾಗೂ ಅಧಿಕಾರಿಗಳು ಸರಿಯಾಗಿ ನೆಲಸಮ ಮಾಡದೆ ತೀರ ಕಳಪೆ ಮಟ್ಟದಿಂದ ತರಾತುರಿಯಲ್ಲಿ ಕಾಮಗಾರಿ ನಿರ್ವಹಣೆಗೆ ಮಾಡುತ್ತಿದ್ದಾರೆ ಕಾಮಗಾರಿ ಪ್ರರಂಭದಲ್ಲಿ ಮೊದಲು ಸೂಚನಾ ಫಲಕ ಅಳವಡಿಸದೇ ಮಣ್ಣಿನಿಂದ ಮಿಶ್ರವಾದ ಮರಳು ಬಳಕೆ ಮಾಡಿ ಗೋಡೆ ನಿರ್ಮಾಣದ ನಂತರ ಕಾಲಮ್ ಹಾಕುತ್ತಿದ್ದಾರೆ ಕಳಪೆಮಟ್ಟದ ಸಿಮೆಂಟ್ ಬಳಸಿ ಅಂತ್ಯತ ತೀರ ಕಳಪೆಯಾದ ಕಾಮಕಾರಿಯಾಗಿದೆ ಅಧಿಕಾರಿಳು ಮಾತ್ರ ಮೌನ ವಹಿಸಿದ್ದಾರೆ.
ಸರಕಾರದ ಹಣ ದುರ್ಬಳಕೆ ಯಾಗುತ್ತಿದೆ ಅವರ ವಿರುದ್ದ ಕ್ರಮ ಜರುಗಿಸಬೇಕು ಗುತ್ತಿಗೆದಾರ ಕಪ್ಪು ಪಟ್ಟಿಗೆ ಸೇರಿಸಬೇಕು ಇಲ್ಲವಾದಲ್ಲಿ ಇಲಾಖೆ ಮುಂದೆ ವಿವಿಧ ಪ್ರಗತಿಪರ ಸಂಘಟನೆಗಳ ಮೂಲಕ ಹೋರಾಟ ಹಮ್ಮಿಕೋಳಲಾಗುವುದು.
ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾದ ಕಾಂಪೌಂಡ್ ತೆರವುಗಳಿಸಿ ಅದಷ್ಟು ಬೇಗ ಉತ್ತಮ ಗುಣಮಟ್ಟದ ಕಾಂಪೌಂಡ್ ವಾಲ್ ಕಾಮಗಾರಿಯನ್ನು ನಡೆಸುವಂತೆ ಅಂಬೇಡ್ಕರ್ ಸೇನೆ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ ಕಡೆಚೂರು , ಎಚ್.ಎ. ಲಿಂಗಪ್ಪ , ಯೋಗಪ್ಪ ದೊಡ್ಡಮನಿ ಯಂಕೋಬ, ಅಗ್ರಹಿಸಿದ್ದಾರೆ.