ಎಂ.ಪಿ.ಪ್ರಕಾಶ್ ಸಾಂಸ್ಕೃತಿಕ ರಾಯಬಾರಿಯಾಗಿದ್ದರು. ;- ಎಂ.ಪಿ.ವೀಣಾ ಮಹಾಂತೇಶ್

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ಹರಪನಹಳ್ಳಿ ;- ಪೋಟೋ, ಬ್ಯಾನರುಗಳಿಗೆ ಸೀಮಿತವಾಗದೆ, ಸಂಕಷ್ಟದಲ್ಲಿರುವ ಜನರ ಕೆಲಸ ಮಾಡುವಂತ ನಾಯಕರಾಗಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ.ವೀಣಾ ಮಹಾಂತೇಶ್ ಹೇಳಿದರು.
ಪಟ್ಟಣದ ತರಳಬಾಳು (ಹೆಚ್.ಪಿ.ಎಸ್.) ಕಾಲೇಜಿನ ಅವರಣದಲ್ಲಿ ಭಾನುವಾರ ಆಜಾತ ಶತೃ, ಕರ್ನಾಟಕ ಮಾಜಿ ಉಪಮುಖ್ಯಮಂತ್ರಿ ಸಾಂಸ್ಕೃತಿಕ ರಾಯಬಾರಿ ದಿ.ಎಂ.ಪಿ.ಪ್ರಕಾಶ್ ರವರ ೮೧ ನೇ ಜನ್ಮದಿನಾಚರಣೆಯ ಅಂಗವಾಗಿ ೧ ಸಾವಿರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಆಹಾರದ ಕಿಟ್, ಮಾಸ್ಕ್, ಮತ್ತು ಸ್ಯಾನಿಟೇಸರ್ ವಿತರಣೆ ಮಾಡುತ್ತಿರುವುದು ನನಗೆ ಸಂತಸವಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಮನೆ, ಸಂಸಾರ, ಪ್ರಾಣದ ಹಂಗು ತೊರೆದು ಕೆಲಸ ಮಾಡಿದ ಆಶಾ ಕಾರ್ಯಕರ್ತರಿಗೆ ಉಡಿ ತುಂಬಿ ಸೀರೆ ಮತ್ತು ಕಿಟ್ಟನ್ನು ವಿತರಿಸಿ ಮಾತನಾಡಿದ ಅವರು ಜನಪ್ರತಿನಿಧಿಗಳು ಜನಗಳ ಸಮಸ್ಯೆಯನ್ನು ಅರ್ಥಮಾಡಿ ಕೊಂಡವರು ಜನಗಳಿಗೆ ಹತ್ತಿರವಾಗಿ ಜನರಿಗೊಸ್ಕರ ಕೆಲಸ ಮಡುವಂತವರು ಜನಪ್ರತಿನಿದಿಗಳು ನಮಗೆ ಬೇಕಾಗಿದೆ, ಕಲ್ಲಿನಲ್ಲಿ ಕೆತ್ತಿದ ಶಾಸನಗಳೇ ಉಳಿದಿಲ್ಲ, ಐದು ಆರು ದಿನದ ಬ್ಯಾನರ್ ಪೋಟೋಗಳಿಗೆ ಜಗಳವಾಡುವುದರ ಅವಶ್ಯಕತೆ ನಮಗೆ ಇಲ್ಲ. ಎಂ.ಪಿ.ಪ್ರಕಾಶ್ ಮತ್ತು ಎಂ.ಪಿ.ರವಿಯಣ್ಣ ಮಾಡಿರುವ ಕೆಲಸ ನಿಮ್ಮ ಹೃದಯದಲ್ಲಿ ಇದ್ದರೆ ಸಾಕು. ಅವರು ಮಾಡಿದ ಕೆಲಸಗಳು ಜನಮಾನಸದಲ್ಲಿ ಉಳಿದು ಕೊಂಡರೆ ಸಾಕು ಎಂದರು.

ನೀಲಗುಂದ ಗುಡ್ಡದ ವಿರಕ್ತ ಮಠದ ಚೆನ್ನಬಸವ ಶಿವಯೋಗಿ ಸ್ವಾಮಿಗಳು ಮಾತನಾಡಿ, ಮಾತು ಸಾಧನೆಯಾಗಬಾರದು ಸಾಧನೆ ಮಾತಗಬೇಕು. ಪ್ರಕಾಶ್ ಅವರು ಜನತಾ ಪರಿವಾರದಿಂದ ರಾಜಕೀಯಕ್ಕೆ ಬಂದವರು. ಸಾಮಾಜವಾದಿ ವಿಚಾರವನ್ನಿಟ್ಟುಕೊಂಡು ರಾಜಕೀಯಕ್ಕೆ ಬಂದವರು. ಎಂ.ಪಿ ಪ್ರಕಾಶರ ಮೂರು ಕಣ್ಣುಗಳಿವೆ. ಎಂ.ಪಿ.ಲತಾ, ಎಂ.ಪಿ.ಸುಮಾ, ಎಂ.ಪಿ.ವೀಣಾ ಅಮೂಲ್ಯವಾಗಿರುವಂತವರು. ಮೂವರು ಒಂದೊAದು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಎಂ.ಪಿ.ಪ್ರಕಾಶ ಅವರು ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುತ್ತಿದ್ದರು, ಹರಪನಹಳ್ಳಿ ಜನರು ಪುಣ್ಯವಂತರು. ಯಾವ ರಾಜಕಾರಣಿ ಕೂಡ ಈ ರೀತಿ ಸೇವೆ ಅಧಿಕಾರ, ಮಂತ್ರಿ ಇಲ್ಲದೇ ಸೇವೆ ಮಾಡಬಹುದು. ಎಂಬುದನ್ನ ತೋರಿಸಿ ಕೊಟ್ಟವರು. ಅವರನ್ನ ಅಜಾರಾಮರ ಗೊಳಿಸಿದವರು ವೀಣಾಮ್ಮನವರು. ಧಣಿವರಿಯದೇ ನಿರಂತರ ಸೇವೆಯನ್ನು ಎರಡು ವರ್ಷದಿಂದ ಮಾಡುತ್ತ ಬಂದಿದ್ದಾರೆ. ಎಂದರು.
ಕೆ.ಪಿ.ಸಿಸಿ. ವೈದ್ಯ ಘಟಕದ ರಾಜ್ಯಧ್ಯಕ್ಷ ಡಾ.ಶ್ರೀನಿವಾಸ, ಉಪಾದ್ಯಕ್ಷ ಡಾ.ಮಹಾಂತೇಶ್ ಚರಂತಿಮಠ್, ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವೇಳೆ ಡಾ.ಹೇಮಾವತಿ, ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ಗಾಯತ್ರಿದೇವಿ, ದೇವಾದಾಸಿ ಸಂಘಟನೆಯ ಅಧ್ಯಕ್ಷೆ ರೇಣುಕಮ್ಮ, ತಿಮ್ಮಾಲಪುರ ನಾಗರಾಜ್, ಸಿದ್ದಲಿಂಗನಗೌಡ್ರು ವಕೀಲರು, ತಾಲೂಕು ಯುವ ಕಾಂಗ್ರೇಸ್ ಉಪಾದ್ಯಕ್ಷ ದಾದಾಪೀರ್ ಮಕರಬ್ಬೀ, ಚೀಗಟೇರಿ ಬ್ಲಾಕ್ ಉಪಾದ್ಯಕ್ಷ ಶಿವರಾಜ್, ಅರುಣ್ ಕುಮಾರ್, ಪಾಟೀಲ್, ಇನ್ನೂ ಆನೇಕರು ಇದ್ದರು.

Share and Enjoy !

Shares