ಕಾರ್ಮಿಕರಿಗೆ ಆಹಾರ ಸಾಮಾಗ್ರಿ ವಿತರಣೆ

Share and Enjoy !

Shares
Listen to this article

ಲಿಂಗಸುಗೂರು : ಪ್ರತಿಯೊಬ್ಬರು ಸರ್ಕಾರದ ಯೋಜನೆಗಳುನ್ನು ಕೂಲಿ ಕಾರ್ಮಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಡಿ.ಎಸ್ ಹೂಲಗೇರಿ ಹೇಳಿದರು.
ಪಟ್ಟಣದ ಎಪಿಎಂಸಿ ಒಳಾಂಗಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಇವರ ಸಯುಂಕ್ತ ಆಶ್ರಯದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ಆಹಾರ ಕಿಟ್‌ಗಳನ್ನು ಸರಿಯಾಗಿ ಹಂಚಿ ಪ್ರತಿಯೊಬ್ಬರಿಗೂ ಮುಟ್ಟವಂತ ಕೆಲಸವನ್ನು ಇಲಾಖೆಯವರು ಮಾಡಬೇಕು, ತಾಲೂಕಿನಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರು ೫೦೦೦ಇದ್ದು ಆ ಎಲ್ಲಾ ಕಾರ್ಮಿಕರಿಗೆ ವಿತರಣೆ ಮಾಡಲಾಗುತ್ತದೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೂಪನಗೌಡ, ಗುಂಡಪ್ಪ ನಾಯಕ, ಚನ್ನಬಸವ, ಪುರಸಭೆ ಸದಸ್ಯ ಯಮನಪ್ಪ, ಮಹಾಂತೇಶ, ಓಂಕಾರ ಕಟ್ಟಡ ಅಧ್ಯಕ್ಷ ರಮೇಶ ಸಿಂಧನೂರು, ಚೆನ್ನಾರೆಡ್ಡಿ, ನಾಗರಡ್ಡೆಪ್ಪ, ಪರಮೇಶ ಸೇರಿ ಕಾರ್ಮಿಕ ಇಲಾಖೆ ಅಧಿಕಾರಿಗಳು ಮತ್ತು ಕೂಲಿ ಕಾರ್ಮಿಕರು ಇದ್ದರು.

Share and Enjoy !

Shares