ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ:ಪಿಟಿ.ಪರಮೇಶ್ವರನಾಯ್ಕ

ಹೂವಿನಹಡಗಲಿ: ತಾಲೂಕಿನ ತಿಪ್ಪಾಪೂರ ಗ್ರಾಮದಿಂದ ಹಡಗಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ವರೆಗೆ, ಸೈಕಲ್ ಜಾಥಕ್ಕೆ ಚಾಲನೆ ನೀಡಿ, ಸೈಕಲ್ ತುಳಿದುಕೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಗತ್ಯವಸ್ತಗಳ ಬೆಲೆ ಏರಿಕೆ ಖಂಡಿಸಿ , ಸರ್ಕಾರದ ವಿರೋಧಿ ನೀತಿಗಳನ್ನ , ರೈತರ, ಬಡವರ,ಹಾಗೂ ಜನ ಸಾಮಾನ್ಯರ ಮೇಲೆ ಹೊರೆಯಾದ ಪೆಟ್ರೋಲ್ ಡೀಸೆಲ್ ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ, ದಿನಸಿ ವಸ್ತುಗಳ ಬೆಲೆ ಏರಿಕೆ ಗಗನಕ್ಕೆ ತಲುಪಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ಅಚ್ಚೆ ದಿನ, ಕೊರಾನ ಹೆಸರಿನಲ್ಲಿ ವ್ಯವಸ್ತೆಯನ್ನು ಹಾಳು ಮಾಡಿದ್ದು, ಜನ ಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಶಾಸಕ ಪಿಟಿ.ಪರಮೇಶ್ವರನಾಯ್ಕ ಅವರು ಹೇಳಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ ಇದು 10 ಪರ್ಸೆಂಟ್ ಸರ್ಕಾರ, ಅಚ್ಚೆ ದಿನಗಳ ಲೆಕ್ಕ ಮಾಡುತ್ತಾ ಹೊರಟಿದೆ. ನೊಂದವರ, ಬಡವರ, ನಿರ್ಗತಿಕರ ಕಂಬನಿ ಒರೆಸುವಲ್ಲಿ ನಿರ್ಲಕ್ಷ್ಯ ತೋರಿದ್ದು ಸರಿಯಲ್ಲ ಎಂದರು. ಮುಖಂಡರಾದ ಎಂ.ಪರಮೇಶ್ವರಪ್ಪ, ಐಗೊಳ ಚಿದಾನಂದ ವಕೀಲರು, ಅಟವಾಳಿಗಿ ಕೊಟ್ರೇಶ, ವಾರದಗೌಸ್ ಮೊಹಿದ್ದೀನ್, ವಿಶ್ವನಾಥ್, ಟಿ.ಮಹಾಂತೇಶ್, ಬ್ಯಾಲಹುಣಿಸಿ ಪಾಟೀಲ್ ಬಸವನಗೌಡ, ಜ್ಯೋತಿ ಮಲ್ಲಣ್ಣ, ಕೊಂಬಳಿ ಪ್ರಕಾಶ್, ಈಟಿ ಹನುಮೇಶ್, ಪಕ್ಕೀರಪ್ಪ, ಖಾಸಿಂಸಾಬ್, ಹನುಮಂತಪ್ಪ, ವಸಂತ, ಬೆನ್ನೂರು ರುದ್ರಪ್ಪ, ಬಿ.ಎಲ್.ಶ್ರೀಧರ್, ಸೊಗಿ ಹಾಲೇಶ್, ಚೇತನ್, ಮಲ್ಲಿಕಾರ್ಜುನ್, ಅರವಳ್ಳಿ ವೀರಣ್ಣ, ಇತರರು ಇದ್ದರು.

Share and Enjoy !

Shares