ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ವಿಜಯನಗರ ವಾಣಿ ಸುದ್ದಿ ಬಳ್ಳಾರಿ ಜಿಲ್ಲೆ

 

ಸಿರುಗುಂಪ : ನಗರದ ಅಭಯಾಂಜನೇಯ ಸ್ವಾಮಿ ದೇವಸ್ಥಾನದಿಂದ ಗಾಂಧಿ ವೃತ್ತದವರೆಗೆ ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ತೆಕ್ಕಲಕೋಟೆ ಬ್ಲಾಕ್ ಕಾಂಗ್ರೆಸ್ ಸಮಿತಿ  ವತಿಯಿಂದ  ಪೆಟ್ರೋಲ್, ಡೀಸೆಲ್, ಅಡುಗೆ ಇಂಧನ ಬೆಲೆ ಏರಿಕೆ ಖಂಡಿಸಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು   ಸೈಕಲ್ ಜಾಥಾ ಮೂಲಕ ಪ್ರತಿಭಟನೆಯನ್ನು  ಬಿ. ಮುರಳಿ ಕೃಷ್ಣ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.

 

ಈ ಸಂದರ್ಭದಲ್ಲಿ ಮಾಜಿ ಶಾಸಕ  ಟಿ.ಎಂ. ಚಂದ್ರಶೇಖರಯ್ಯ ಸ್ವಾಮಿ ಹಾಗೂ ಬಿ.ಎಂ ನಾಗರಾಜ ಹಾಗೂ ವೀಕ್ಷಕರಾದ  ವೇಣು ಗೌಡ ಪಾಟೀಲ್ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎನ್.ಕರಿಬಸಪ್ಪ ನಾಗ ರುದ್ರಗೌಡ ಕಾಂಗ್ರೆಸ್ ಹಿರಿಯ ಮುಖಂಡರಾದ  ಎಂ. ಗೋಪಾಲರೆಡ್ಡಿ, ಮಲ್ಲಿಕಾರ್ಜುನ ಬಾಳಪ್ಪ, ವೆಂಕಟರಾಮರೆಡ್ಡಿ ಪೂಜಾರಿ ಮಲ್ಲಿಕಾರ್ಜುನ, ಮಾರುತಿ ವರಪ್ರಸಾದ ರೆಡ್ಡಿ, ಮಹಮದ್ ನೂರಲ್ಲ ಶ್ರೀನಿವಾಸ್ ರೆಡ್ಡಿ ದಶರಥ  ರೆಡ್ಡಿ ಗುಜರಿ  ಇನೂಸ್ ಹಾಗೂ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಮುಲ್ಲಾ ರೋಪ್ ಹಿಂದುಳಿದ ಘಟಕದ ಅಧ್ಯಕ್ಷರಾದ ಕಾಯಿಪಲ್ಲೆ ನಾಗರಾಜು ನಗರಸಭೆ ಅಧ್ಯಕ್ಷರಾದ ಡಿ.ನಾಗರಾಜ ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾದ ಡಿ.ಚಿದಾನಂದ ಚಿದನಂದ ರಾಯ್ಡು ಜಿಲ್ಲಾ ಯುವ ಕಾಂಗ್ರೆಸ್ ಗ್ರಾಮೀಣ ಉಪಾಧ್ಯಕ್ಷರಾದ ಮಣಿಕಂಠ ನಾಯಕ ಮತ್ತು ಕಾರ್ಯದರ್ಶಿಗಳಾದ ಶರಣಬಸಯ್ಯ ಹಾಗೂ ಸಿರುಗುಪ್ಪ ಕಾರ್ಮಿಕ ಯುವ ಘಟಕ ಅಧ್ಯಕ್ಷರಾದ ಅಯ್ಯಾಳಪ್ಪ  ನಾಡಂಗ ಸಿರುಗುಪ್ಪ ಹಾಗೂ ತೆಕ್ಕಲಕೋಟೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರುಗಳಾದ ಬನ್ನಿ ಗೌಡ ಗೋವಿಂದ ಮತ್ತು ಸಿರುಗುಪ್ಪ ಹಾಗೂ ತೆಕ್ಕಲಕೋಟೆ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷರಾದ ಪ್ರಹ್ಲಾದ ಪುರುಷೋತ್ತಮ್ ಹಾಗೂ ಎಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸಿರುಗುಪ್ಪ ನಗರಸಭೆ ಎಲ್ಲಾ ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

Share and Enjoy !

Shares