ವಿಜಯನಗರವಾಣಿ ಸುದ್ದಿ
ಕಂಪ್ಲಿ: ಪ್ರತಿಯೊಬ್ಬರಿಗೂ ಕ್ರೀಡೆ ಅತ್ಯಂತ ಅವಶ್ಯಕ. ಕ್ರೀಡೆಗಳಿಂದ ಮನುಷ್ಯ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢನಾಗುತ್ತಾನೆ ಎಂದು ಮಾಜಿ ಶಾಸಕ ಟಿ.ಎಚ್.ಸುರೇಶ್ ಬಾಬು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹಂಪಾದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕಜಾಯಿಗನೂರು ಗ್ರಾಮದಲ್ಲಿ ಮಾರೆಮ್ಮದೇವಿ ಕ್ರಿಕೆಟ್ ಕ್ಲಬ್‍ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವದಿಂದ ಪಾಲ್ಗೊಳ್ಳಬೇಕು. ಸೋಲು-ಗೆಲುವು ಮುಖ್ಯವಲ್ಲ. ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮ ಮನಸ್ಥಿತಿಯಲ್ಲಿ ತೆಗೆದುಕೊಳ್ಳಬೇಕು. ಕ್ರೀಡಾಪಟುಗಳ ಪ್ರತಿಭೆಗಳನ್ನು ಗುರುತಿಸಲು ಕ್ರೀಡಾಕೂಟದಂತಹ ವೇದಿಕೆಗಳು ಅಗತ್ಯವಾಗಿವೆ. ಈ ನಿಟ್ಟಿನಲ್ಲಿ ಕ್ರೀಡೆಗಳ ಆಯೋಜನೆಜತೆಗೆ ದೇಶಿಯ ಕ್ರೀಡೆಗಳಿಗೆ ಹೆಚ್ಚಿನಆಧ್ಯತೆ ನೀಡಿ ಪೆÇ್ರೀತ್ಸಾಹಿಸಬೇಕು ಎಂದರು.
ನಂತರ ಮಾರೆಮ್ಮದೇವಿ ಕ್ರಿಕೆಟ್ ಕ್ಲಬ್‍ನ ಯುವ ಮುಖಂಡ ವಿ.ಕಾರ್ತಿಕ ಮಾತನಾಡಿ, ಪ್ರತಿ ವರ್ಷದಂತೆ ಕಳೆದ 26 ವರ್ಷಗಳಿಂದ ಮಾರೆಮ್ಮದೇವಿ ಕ್ರಿಕೆಟ್ ಕ್ಲಬ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿಗಳನ್ನು ಹಮ್ಮಿಕೊಂಡು ಬಂದಿದ್ದೇವೆ. ಈ ಕ್ರೀಡಾಕೂಟದಿಂದ ಯುವಕರ ಪ್ರತಿಭೆಗಳನ್ನು ಹೊರತರಬಹುದು. ಇಂತಹ ಕ್ರೀಡೆಗಳಲ್ಲಿ ಕ್ರೀಡಾಪಟುಗಳು ಭಾಗವಹಿಸಿ, ತಮ್ಮಲ್ಲಿರುವ ಅವಿರತದ ಪ್ರತಿಭೆಗಳನ್ನು ತೋರ್ಪಡಿಸಬೇಕುಎಂದರು.
ಇದೇ ಸಂದರ್ಭದಲ್ಲಿ ಜನಪ್ರಿಯ ನಾಯಕ ಸುರೇಶ್ ಬಾಬು, ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯಾವಳಿಯಲ್ಲಿ ಕಂಪ್ಲಿ ತಂಡವು ಪ್ರಥಮ ಸ್ಥಾನದೊಂದಿಗೆ 10 ಸಾವಿರ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡರೆ, ಚಿಕ್ಕಜಾಯಿಗನೂರು ತಂಡವು ದ್ವಿತೀಯ ಸ್ಥಾನ ಪಡೆದು 5 ಸಾವಿರ ನಗದು ಬಹುಮಾನ ಮತ್ತುಆಕರ್ಷಕ ಕಪ್‍ನೊಂದಿಗೆ ತೃಪ್ತಿಪಟ್ಟರು. ಈ ಕ್ರೀಡಾಕೂಟದಲ್ಲಿ 22 ತಂಡಗಳು ಭಾಗವಹಿಸಿದ್ದವು.
ಈ ಕಾರ್ಯಕ್ರಮದಲ್ಲಿ ಸಿಪಿಐ ಸುರೇಶ್ ಎಚ್.ತಳವಾರ, ಪಿಎಸ್‍ಐ ವಿರೂಪಾಕ್ಷಪ್ಪ, ಗ್ರಾಪಂ ಸದಸ್ಯ ವಡ್ರು ಹನುಮಂತಪ್ಪ, ಮಾರೆಮ್ಮದೇವಿ ಕ್ರಿಕೆಟ್ ಕ್ಲಬ್‍ನ ಪದಾಧಿಕಾರಿಗಳಾದ ಡಿ.ಮಾರೆಣ್ಣ, ಪ್ರವೀಣ, ದೇವೇಗೌಡ, ಸುರೇಶ್, ದೊಡ್ಡ ಬಸಪ್ಪ, ಶಿವು, ಗಾದಿಲಿಂಗ, ಮುಖಂಡರಾದ ಪಂಪನಗೌಡ, ಕುಟುಂಬರಾವ್, ಕಾಟಂರಾಜ್, ಮಾರೆಪ್ಪ, ರಮೇಶಗೌಡ, ಡಿ.ವೆಂಕಟೇಶ ಸೇರಿದಂತೆ ಮುಖಂಡರು ಹಾಗೂ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.