ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರಕ್ಕೆ ಸಿಡಿಪಿಒ ರಾಮನಗೌಡ ಬೇಟಿ, ಕೇಂದ್ರದ ಮಕ್ಕಳ ಬೀಳ್ಕೊಡುಗೆ.

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ಹೂವಿನಹಡಗಲಿ: ಪಟ್ಟಣದಲ್ಲಿರುವ ಹರಪನಹಳ್ಳಿ ರಸ್ತೆಯ ಬಾಲ ಚೈತನ್ಯ ಮಕ್ಕಳ ಆರೈಕೆ ಕೇಂದ್ರಕ್ಕೆ ಸಿಡಿಪಿಒ ರಾಮನಗೌಡ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಇಂದು ಭಾನುವಾರ ಮಕ್ಕಳ ಆರೋಗ್ಯ, ತೂಕ, ಮತ್ತಿತರ ಮಾಹಿತಿ ಸಂಗ್ರಹಿಸಿ ಜೂನ್ ತಿಂಗಳ 28 ರಿಂದ ಜುಲೈ ತಿಂಗಳ 11 ರ ತನಕ, ಇಲ್ಲಿಯವರೆಗೆ, ಅಪೌಷ್ಠಿಕತೆಯುಳ್ಳ ಮಕ್ಕಳ ಬೆಳವಣಿಗೆ ಮತ್ತು ಆಹಾರ ಸೇವನೆ ಅಗತ್ಯ ಪ್ರಮಾಣದಲ್ಲಿ ಹೇಗೆ ಮಕ್ಕಳ ಆರೈಕೆ ಕುರಿತು ಗಮನ ಹರಿಸಬೇಕು. ಸೂಕ್ತ ಚಿಕಿತ್ಸೆ, ಆರೈಕೆ, ಸಲಹೆ, ಮಾರ್ಗದರ್ಶನ, ಹಾಗೂ ಮಕ್ಕಳ ಪೆÇೀಷಣೆಯಲ್ಲಿ ತಾಯಿಂದಿರು ಕೈಗೊಳ್ಳಬೇಕಾದ ಅಂಶಗಳನ್ನು ಈ ಕೇಂದ್ರದಲ್ಲಿನ ತಾಯಿಂದಿರಿಗೆ ಸಲಹೆ ನೀಡಿದರು. ಪೆÇೀಷಕರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ “ಇಲ್ಲಿನ ಮಕ್ಕಳ ಆರೈಕೆ ಕೇಂದ್ರದ ಎಲ್ಲಿ ಮಕ್ಕಳ ಆರೈಕೆ ಚೆನ್ನಾಗಿ ನೀಡಿದ್ದಾರೆ. ಸೂಕ್ತ ಚಿಕಿತ್ಸೆ, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿದ್ದಾರೆಂದು ಹೇಳಿದರು. ಈ ಸಂದರ್ಭದಲ್ಲಿ ಸಂಯೋಜಕರು ಶಿವರಾಜ, ಸಹಾಯಕ ಸಂಯೋಜಕರು ಗಂಗಾಧರ.ಸಿ., ಮಹಿಳಾ ಮೇಲ್ವಿಚಾರಕಿಯರಾದ ಚಿಮಣೆನಮ್ಮ, ಗಿರಿಜಮ್ಮ , ಅಂಗನವಾಡಿ ಫೆಡರೇಷನ್ ಅಧ್ಯಕ್ಷೆ ಬಿ.ಜಯಲಕ್ಷ್ಮೀ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಮಕ್ಕಳ ತಾಯಿಂದಿರು ಇದ್ದರು.

Share and Enjoy !

Shares