ವಿಜಯನಗರವಾಣಿ ಸುದ್ದಿ
ಮಸ್ಕಿ : ಪಟ್ಟಣದ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಚೈತನ್ಯಗೊಳಿಸುವ ನಿಟ್ಟಿನಲ್ಲಿ ಆರಂಭಿಸಿದ ಸಂಡೆ ಫಾರ್ ಸೋಶಿಯಲ್ ವರ್ಕ್ ಅಭಿಯಾನಕ್ಕೆ ಮಸ್ಕಿಯ ಗಾಂಧಿ ನಗರದ ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನ್ನು ಸ್ವಚ್ಛಗೊಳಿಸಿ ಸಸಿಗಳನ್ನು ನೆಡುವ ಮೂಲಕ ಚಾಲನೆಯನ್ನು ನೀಡಲಾಯಿತು.
ಈ ಅಭಿಯಾನದ ಭಾಗವಗಿ ಪ್ರತಿ ರವಿವಾರವನ್ನು ಸಮಾಜ ಸೇವೆಗಾಗಿ ಮೀಸಲಿಡುವಂತೆ ನಾಗರಿಕರಲ್ಲಿ ಕೇಳಿಕೊಂಡು ಹಾಗೂ ಅಭಿನಂದನ್ ಸಂಸ್ಥೆಯ ವತಿಯಿಂದ ಪ್ರತಿಜ್ಞೆ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿಗಳಾದ ದಾನಪ್ಪ ನಿಲೋಗಲ್ ಅವರು ಎಲ್ಲಾ ನಾಗರೀಕರು ಪರಿಸರವನ್ನು ರಕ್ಷಣೆ ಮಾಡಿ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ಕಲ್ಪಿಸುವದು ನಮ್ಮ ಮೂಲಭೂತ ಕರ್ತವ್ಯವಾಗಿದೆ ಹಾಗೂ ಈ ಮಾರ್ಗದಲ್ಲಿ ಸಾಗುತ್ತಿರುವ ಅಭಿನಂದನ್ ಸಂಸ್ಥೆಯ ಜೊತೆಗೆ ಕೈ ಜೋಡಿಸಲು ಮನವಿ ಮಾಡಿದರು.
ನಂತರ ಮಾತನಾಡಿದ, ಶಿವಪ್ರಸಾದ್ ಕ್ಯಾತನಟ್ಟಿ ಅವರು ಅಭಿನಂದನ್ ಸಂಸ್ಥೆಯ ನೂತನ ಅಭಿಯಾನವು ಬಹಳ ಉತ್ತಮವಾಗಿದ್ದು ಈ ಅಭಿಯಾನದ ಮೂಲಕ ಪ್ರತಿಯೊಬ್ಬ ವ್ಯಕ್ತಿ ತಾನೂ ಪ್ರತಿ ರವಿವಾರ ಸಮಾಜಕ್ಕಾಗಿ ಮೀಸಲಿಟ್ಟರೆ ಒಂದು ವರ್ಷದಲ್ಲಿ ಅವನು ಐವತ್ತು ರವಿವಾರಗಳನ್ನು ಸಮಾಜಕ್ಕಾಗಿ ಮೀಸಲಿಟ್ಟಂತಾಗಿ ಸಮಾಜದ ಏಳಿಗೆಯಲ್ಲಿ ಅವನ ಪಾತ್ರ ಮಹತ್ವಪೂರ್ಣವಾಗಿರುತ್ತೆ ಎಂಬ ಉತ್ತಮ ಸಂದೇಶ ನೀಡುವ ಮೂಲಕ ತಮ್ಮ ಜೀವನದ ಪ್ರತಿ ರವಿವಾರವನ್ನು ಸಮಾಜಕ್ಕಾಗಿ ಮೀಸಲಿಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ , ನೀಲಕಂಟಪ್ಪ ಭಜಂತ್ರಿ, ಸಂತೋಷ್ ಪತ್ತಾರ್, ಸದ್ದಾಂ, ಬಸವರಾಜ ಸುಂಕದ್ ಸಂಸ್ಥೆಯ ಅಭಿನಂದನ್ ಸಂಸ್ಥೆಯ ಕಾರ್ಯದರ್ಶಿಗಳಾದ ರಾಮಣ್ಣ ಹಂಪರಗುಂದಿ, ಸಂಸ್ಥೆಯ ಸದಸ್ಯರಾದ ಮಲ್ಲಿಕಾರ್ಜುನ ಬಡಿಗೇರ್, ಬಸವರಾಜ ರಂಗಾಪೂರ, ಹನುಮಂತ, ಅಮೀತ್ ಕುಮಾರ್ ಪುಟ್ಟಿ, ಕಾರ್ತಿಕ್ ಜೋಗೀನ್, ಕಿಶೋರ್ ಹಾಗೂ ಇತರರು ಉಪಸ್ಥಿತರಿದ್ದರು.