ಗ್ರಾಮ ಪಂಚಾಯತಿ ನೌಕರರ ಬೇಡಿಕೆ ಕೂಡಲೇ ಈಡೇರಿಸಿ- ಮಡಿವಾಳರ್

Share and Enjoy !

Shares

ವಿಜಯನಗರ ವಾಣಿ ಸುದ್ದಿ ರಾಯಚೂರು

 

ಲಿಂಗಸೂಗೂರು  ; ತಾಲ್ಲೂಕಿನ ಮುದಗಲ್ ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಯನ್ನು  ಕೂಡಲೇ  ಈಡೇರಿಸಬೇಕು ಎಂದು ರಾಯಚೂರು ಜಿಲ್ಲಾ ಗ್ರಾಮ ಪಂಚಾಯಿತಿ ನೌಕರರ ಸಂಘದ  ಪ್ರಧಾನ ಕಾರ್ಯದರ್ಶಿ ಮೌನೇಶ ಮಡಿವಾಳರ್  ಒತ್ತಾಯಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 170 ಗ್ರಾಮ ಪಂಚಾಯಿತಿ ಇದ್ದು ಆ  ಗ್ರಾಪಂಗಳಲ್ಲಿ ಕೆಲಸ  ನಿರ್ವಹಿಸುತ್ತಿರುವ ಕರ ವಸೂಲಿಗಾರ, ವಾಟರ್ ಮ್ಯಾನ್, ಕಂಪ್ಯೂಟರ್ ಆಪರೇಟರ್ ಸೇರಿದಂತೆ ಈ ಜಿಲ್ಲೆಯಲ್ಲಿ 1400 ಕ್ಕೂ ಹೆಚ್ಚು ಸಿಬ್ಬಂದಿಗೆ ಇದ್ದಾರೆ ಕಳೆದ 15 ತಿಂಗಳಿಂದ ಸಿಬ್ಬಂದಿ ವೇತನ ಬಾಕಿ ಉಳಿದಿದ್ದು ಇದುವರೆಗೂ ವೇತನ ನೀಡುತ್ತಿಲ್ಲ.  ಕೂಡಲೇ ಸರ್ಕಾರ ಈ ಎಲ್ಲ ಬಾಕಿ  ಹಣ ಕೂಡಲೇ ಮಂಜೂರು ಮಾಡಬೇಕು ಇಲ್ಲದಿದ್ದರೆ ಇದೇ ತಿಂಗಳ ಜುಲೈ 15 ರಂದು ಜಿಲ್ಲಾ ಪಂಚಾಯತಿ ಎದುರು ಪ್ರತಿಭಟನೆ ಮಾಡಲಾಗುವುದು ಎಂದು  ಒತ್ತಾಯಿಸಿದರು. ಕೇವಲ 15 ತಿಂಗಳು ವೇತನ  ಮಾತ್ರ ನಿಂತಿಲ್ಲ  ಕೆಲ ಗ್ರಾಮ ಪಂಚಾಯಿತಿಗಳಲ್ಲಿ 70 ಕ್ಕೂ ಹೆಚ್ಚು ತಿಂಗಳು ವೇತನ ನೀಡಿಲ್ಲ ಎಂದು ಆರೋಪ ಮಾಡಿದರು. ಈ ಕೋವಿಡ್ ಸಂಕಷ್ಟದ ನಡುವೆ ರಾಯಚೂರು ಜಿಲ್ಲೆಯ 170 ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಹಗಲಿರುಳು ಶ್ರಮಿಸುತ್ತಿರುವ ಸಿಬ್ಬಂದಿಗಳು ಇದುವರೆಗೂ  ವೇತನ ಸಮಸ್ಯೆ ಎದುರಿಸುತ್ತಿದ್ದಾರೆ. ಇದೇ ಮಟ್ಟೂರು ಗ್ರಾಮ ಪಂಚಾಯಿತಿಯಲ್ಲಿ ಸುಮಾರು 71 ತಿಂಗಳ ದಿಂದ ಸಿಬ್ಬಂದಿಗಳಿಗೆ ವೇತನ ನೀಡಿಲ್ಲ.  ಹಾಗೂ 15ನೇ ಹಣಕಾಸು ಯೋಜನೆಯಡಿಯಲ್ಲಿ ಕೂಡ ಹಣವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಈ ರೀತಿ ಆದರೆ ನಾವು ಬದುಕುವುದು ಬಾಹಳಷ್ಟು ಕಷ್ಟವಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಬಿಲ್ ಕಲೆಕ್ಟರ್, ಗುಮಾಸ್ತರಿಂದ ಕಾರ್ಯದರ್ಶಿ ಗ್ರೇಡ್-2, ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ನೀಡುವಂತೆ ಜುಲೈ 2 ರಂದು ಸರ್ಕಾರ ಆದೇಶ ಹೊರಡಿಸಿದ್ದು ಮರಳಿ ಆದೇಶವನ್ನು ತಡೆ ಇಡಿದು ಮರು ಆದೇಶ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದರು.  ವೇತನದ ಜೋತೆಗೆ ತಕ್ಷಣವೇ ನಮ್ಮ ಎಲ್ಲ ಬೇಡಿಕೆಗಳನ್ನು ಸರ್ಕಾರ  ಈಡೇರಿಸಬೇಕು ಇಲ್ಲದಿದ್ದರೆ ಸಿಬ್ಬಂದಿಗಳ ಜೋತೆ ಉಗ್ರ ಹೋರಾಟ ಮಾಡಲಾಗುವುದು ಎಂದರು.

 

( ಜುಲೈ 15 ರಂದು ಪ್ರತಿಭಟನೆ ಮಾಡವ ಈ ವಿವಿಧ ಬೇಡಿಕೆಗಳಾದ ಬಡ್ತಿಗೆ ಆರ್ಥಿಕ ಇಲಾಖೆ ಒಪ್ಪಿಗೆ ಕೊಟ್ಟರು ಕೂಡ ಆರ್ ಡಿ ಪಿ ಆರ್ ಇಲಾಖೆಯವರ ದುರುದ್ದೇಶದಿಂದ  ಬಿಲ್ ಕಲೆಕ್ಟರ್/ಗುಮಾಸ್ತ ರಿಂದ ಕಾರ್ಯದರ್ಶಿ ಗ್ರೇಡ್-2 ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ತಿ ಆದೇಶ ಹಿಂಪಡೆದಿದ್ದು ಅದನ್ನು ಮತ್ತೆ ಮೊದಲಿನಂತೆ ಜಾರಿಗೊಳಿಸಬೇಕು, 15ನೇ ಹಣಕಾಸು ಯೋಜನೆಯಲ್ಲಿ ಸಿಬ್ಬಂದಿಗಳ ವೇತನ ಕೂಡಲೇ  ಪಾವತಿಸಬೇಕು, ಸ್ವೀಪರ್ಸ/ಸ್ವಚ್ಚತಾ ಗಾರರ ಅನುಮೋದನೆ ಮತ್ತು ಇತರ ಸಿಬ್ಬಂದಿಗಳ ಅನುಮೋದನೆ ಮಾಡಬೇಕು, ಕರೋನಾ ದಿಂದ ಮೃತರಾದವರ ಕುಟುಂಬಕ್ಕೆ ರೂ.30 ಲಕ್ಷ ಪರಿಹಾರ ಒದಗಿಸಬೇಕು, 

ಇ ಎಫ್ ಎಂ ಎಸ್  ನಲ್ಲಿ ಇನ್ನೂ ಸೇರಿಸದೇ ಉಳಿದಿರುವ ಸಿಬ್ಬಂದಿಗಳ ಮಾಹಿತಿ ಅಳವಡಿಸಬೇಕು, ಅಕ್ರಮ ನೇಮಕಾತಿಗಳು ತಡೆಯಬೇಕು 

ಈ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇದೇ ಜುಲೈ 15 ರಂದು ರಾಯಚೂರು  ಜಿಲ್ಲಾ ಪಂಚಾಯತ ಕಛೇರಿ ಮುಂದೆ ಪ್ರತಿಭಟನೆ ಮಾಡಿ ಜಿಲ್ಲಾ ಪಂಚಾಯತ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಸಚಿವರಿಗೆ, ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು)

 

Share and Enjoy !

Shares