ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗುವ ಕಾರ್ಮಿಕ ಬೈಕ್ ಆಯತಪ್ಪಿ ಬಿದ್ದು ಇಬ್ಬರಿಗೆ ಗಂಭೀರ ಗಾಯ : ಸ್ಥಳಕ್ಕೆ ಜಿಪಂ ಸಿಇಓ ಕೆ. ಆರ್. ನಂದಿನಿ ಭೇಟಿ ಪರಿಶೀಲನೆ

ವಿಜಯನಗರ ವಾಣಿ ಸುದ್ದಿ

 

ಕುರುಗೋಡು. ಸಮೀಪದ ಒರ್ವಾಯಿ ಗ್ರಾಮದಲ್ಲಿಗ್ರಾ ನರೇಗಾ ಯೋಜನೆ ಯಡಿಯಲ್ಲಿ ಉದ್ಯೋಗ ಖಾತರಿ ಕೆಲಸಕ್ಕಾಗಿ ಹೋಗುವ ಕಾರ್ಮಿಕರು ದ್ವಿಚಕ್ರ ವಾಹನ ಆಯಾತಪ್ಪಿನಿಂದಾಗಿ ಅಪಘಾತ ಸಂಭವಿಸಿರುವ ಘಟನೆ ಬುಧವಾರ ಬೆಳಿಗ್ಗೆ ಜರುಗಿದೆ.

ಗ್ರಾಮದ ಕಾರ್ಮಿಕರಾದ ಜಿ.ಎನ್.ಬಸವರಾಜು ಹಾಗೂ ಕರೀಮ್ ಸಾಬ್ ಇಬ್ಬರು ದ್ವಿಚಕ್ರ ವಾಹನದಲ್ಲಿ ಕಬ್ಬಿಣದ ಗಡಾರೆ ಹಾಗೂ ಪುಟ್ಟಿಗಳನ್ನು ಇಟ್ಟುಕೊಂಡು  ಕೆಲಸಕ್ಕೆ ಹೋಗುವ ವೇಳೆ  ಬೈಕ್ ಆಯತಪ್ಪಿದ  ಕಾರಣ ಕಬ್ಬಿಣದ ಗಡಾರೆ ಬಸವರಾಜನ ಹೊಟ್ಟೆಯ ಕೆಳಗಡೆ ಹೋಗಿದ್ದು, ಕರೀಂ ಸಾಬ್‍ನಿಗೆ ಮೊಣಕಾಲಿಗೆ ತಾಕಿದ್ದು  ತೀವ್ರ ಗಾಯಗಳು ಉಂಟಾಗಿದ್ದು 

ತಕ್ಷಣವೇ ಚಿಕಿತ್ಸೆಗಾಗಿ ಜಿಲ್ಲಾ  ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿಲಾಗಿದೆ.ಈ ಘಟನೆ ತಿಳಿದು   ತಕ್ಷಣವೇ  ಜಿಪಂ ಸಿಇಓ ಕೆಆರ್.ನಂದಿನಿ ಆಸ್ಪತ್ರಗೆ ಬೇಟಿ ನೀಡಿ ಜಿಲ್ಲಾ ಸರ್ಜನ್ ಬಸುರೆಡ್ಡಿ ಮತ್ತು ವಿಮ್ಸ್ ನಿರ್ದೇಶಕ ಡಾಕ್ಟರ್ ರವಿಭೀಮಪ್ಪ ರವರನ್ನು ಕರೆಯಿಸಿ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ. ನಂತರ ಕಾರ್ಮಿಕರಿಗೆ ಧೈರ್ಯ ತುಂಬಿ ಅವರ ಆರೋಗ್ಯಕ್ಕೆ ತಗುಲುವ ವೆಚ್ಚವನ್ನು ಜಿಪಂ. ನಿಧಿಯಿಂದ ನೀಡಲಾಗುವದೆಂದು ಭರವಸೆ ನೀಡಿದರು.

ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವೇಳೆ ತಾಪಂ. ಇಒ ಎಂ.ಬಸಪ್ಪ, ನರೇಗಾ ಸಹಾಯಕ ನಿರ್ದೇಶಕ ಶಿವರಾಮರೆಡ್ಡಿ, ಪಿಡಿಓ ವೆಂಕಟಮ್ಮ, ಗ್ರಾಪಂ. ಅಧ್ಯಕ್ಷ ಶರಣಪ್ಪ.ಗ್ರಾಪಂ ಸದಸ್ಯರು ಸೇರಿದಂತೆ ಇತರರು ಇದ್ದರು.

 

Share and Enjoy !

Shares