ಪತ್ರಕರ್ತ ದಿ.ಮಂಜುನಾಥ್ ಸಾಲಿಮಠ ಅವರ ದ್ವಿತೀಯ ಪುಣ್ಯ ಸ್ಮರಣೆ ಅಂಗವಾಗಿ : ಆಹಾರ ಕಿಟ್ ವಿತರಣೆ

Share and Enjoy !

Shares
Listen to this article
ವಿಜಯನಗರ ವಾಣಿ ಸುದ್ದಿ ರಾಯಚೂರು ಜಿಲ್ಲೆ
ಮಸ್ಕಿ : ಪತ್ರಕತ೯ ದಿ.ಮಂಜುನಾಥ ಸಾಲಿಮಠ ಅವರ ದ್ವಿತೀಯ ವಷ೯ದ ಪುಣ್ಯಸ್ಮರಣೆಯ ಅಂಗವಾಗಿ ಸಿನಿಮಾ ಸಿಬ್ಬಂದಿಗೆ ಆಹಾರ ಧಾನ್ಯ ಕಿಟ್ ನ್ನು ವಿತರಿಸಲಾಯಿತು.
ಪಟ್ಟಣದ ಚಿತ್ರಮಂದಿರದ ಆಪರೇಟರ್, ಬುಕ್ಕಿಂಗ್ ಕ್ಲಕ್೯ ಮತ್ತು ಗೇಟ ಕೀಪರ್ ಗಳಿಗೆ ಕಿಟ್ ನ್ನು ಹಂಚಿಕೆ ಮಾಡಲಾಯಿತು. ಅಡುಗೆ ಎಣ್ಣೆ, ಬೇಳೆ, ಬೆಲ್ಲ, ಗೋಧಿಹಿಟ್ಟು, ಕಡ್ಲಿ, ಮಸಾಲ ಪದಾರ್ಥ ಸೇರಿದಂತೆ ೧೫ ಸಾಮಾಗ್ರಿಗಳನ್ನು ಒಳಗೊಂಡ ಕಿಟ್ ನ್ನು ಹಿರಿಯ ಪತ್ರಕರ್ತ ಅಬ್ದುಲ್ ಅಜೀಜ್, ಶರಣಬಸವ ಸೊಪ್ಪಿಮಠ, ನಾಗರಾಜ ಯಂಬಲದ, ಪತ್ರಕರ್ತರಾದ ಅಮರೇಶ ಸಾಲಿಮಠ, ಆನಂದ ಕನಸಾವಿ ಚಿತ್ರಮಂದಿರ ಸಿಬ್ಬಂದಿಗೆ ವಿತರಿಸಿದರು.

Share and Enjoy !

Shares