ವಿಜಯನಗರ ವಾಣಿ
ಹೈವೋಲ್ಟೇಜ್ ಸಿನಿಮಾಗಾಗಿ ರಾಮ್ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಅಭಿಮಾನಿಗಳ ಜೊತೆ ಇತರೆ ಸಿನಿಪ್ರಿಯರು ಕಾಯುತ್ತಿದ್ದಾರೆ. ಇದೇ ವರ್ಷ ಅಕ್ಟೋಬರ್ 13ಕ್ಕೆ ಆರ್ಆರ್ಆರ್ ರಿಲೀಸ್ ಆಗಲಿದೆ. ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸುವ ಕಾರಣಕ್ಕೆ ಚಿತ್ರತಂಡ ಈಗ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದೆ. ರಾಜಮೌಳಿ ನಿರ್ದೇಶನದಲ್ಲಿ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ತೇಜ ತೆರೆ ಹಂಚಿಕೊಳ್ಳುತ್ತಿರುವ ಸಿನಿಮಾ ಆರ್ಆರ್ಆರ್. ಬಾಹುಬಲಿ ನಂತರ ರಾಜಮೌಳಿ ಅವರು ನಿರ್ದೇಶನ ಮಾಡುತ್ತಿರುವ ಚಿತ್ರ ಇದಾಗಿದ್ದು, ಇದರ ಬಗ್ಗೆ ಸಿನಿಪ್ರಿಯರಲ್ಲಿ ಸಾಕಷ್ಟು ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಚಿತ್ರದ ಬಗ್ಗೆ ರಾಜಮೌಳಿ ಅವರ ನಿರ್ದೇಶನದಿಂದಾಗಿ ಟಾಲಿವುಡ್ ಮಾತ್ರವಲ್ಲದೆ ಬೇರೆ ಭಾಷೆಗಳ ಚಿತ್ರರಂಗವರಿಗೂ ತುಂಬಾ ಕುತೂಹಲವಿದೆ. ಬಾಹುಬಲಿ ಸಿನಿಮಾದಿಂದಾಗಿ ರಾಜಮೌಳಿ ಅವರ ನಿರ್ದೇಶನದ ಸಿನಿಮಾಗಳ ಮೇಲೆ ಎಲ್ಲರ ಗಮನ ನೆಟ್ಟಿದೆ. ಎಲ್ಲ ಸರಿಯಾಗಿದಿದ್ದರೆ, ಈಗಾಗಲೇ ಆರ್ಆರ್ಆರ್ ರಿಲೀಸ್ ಆಗಿರುತ್ತಿತ್ತು. ಆದರೆ ಕೊರೋನಾ ಕಾರಣದಿಂದಾಗಿ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಲಾಕ್ಡೌನ್ ಸಡಿಲಗೊಂಡ ಕೂಡಲೇ ರಾಜಮೌಳಿ ಹಾಗೂ ಅವರ ತಂಡ ಶೂಟಿಂಗ್ ಆರಂಭಿಸಿತು. ಸಿನಿಮಾದ ನಿರ್ಮಾಪಕ ದಾನಯ್ಯ, ನಿರ್ದೇಶಕ ರಾಜಮೌಳಿ ಹಾಗೂ ರಾಮ್ ಚರಣ್ಗೆ ಕೋವಿಡ್ ಸೋಂಕಾಗಿದ್ದ ಕಾರಣ ಶೂಟಿಂಗ್ ಮತ್ತಷ್ಟು ತಡವಾಯಿತು. ಇದ್ದ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಇತ್ತೀಚೆಗಷ್ಟೆ ರಾಜಮೌಳಿ ಅವರು ಆರ್ಆರ್ಆರ್ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಅಪ್ಡೇಟ್ ಕೊಟ್ಟಿದ್ದರು. ನಂತರ ಇದೇ ಚಿತ್ರಂಡ ಸಿನಿಮಾದ ರಿಲೀಸ್ ದಿನಾಂಕ ಪ್ರಕಟಿಸಿತು. ಹೈವೋಲ್ಟೇಜ್ ಸಿನಿಮಾಗಾಗಿ ರಾಮ್ಚರಣ್ ಹಾಗೂ ಜೂನಿಯರ್ ಎನ್ಟಿಆರ್ ಅಭಿಮಾನಿಗಳ ಜೊತೆ ಇತರೆ ಸಿನಿಪ್ರಿಯರು ಕಾಯುತ್ತಿದ್ದಾರೆ. ಇದೇ ವರ್ಷ ಅಕ್ಟೋಬರ್ 13ಕ್ಕೆ ಆರ್ಆರ್ಆರ್ ರಿಲೀಸ್ ಆಗಲಿದೆ. .