ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ
ಲಿಂಗಸುಗೂರು : ಸ್ಥಳೀಯ ಉಪನೊಂದಣಾಧಿಕಾರಿಯಾಗಿ ಹೆಚ್.ಜೆ. ನಿವೇದಿತಾ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ದೇವದುರ್ಗದಲ್ಲಿ ಉಪನೋಂದಣಾಧಿಕಾರಿ ಯಾಗಿದ್ದ ಇವರು ಸಿಂಧನೂರಿನಲ್ಲಿ ಪ್ರಭಾರಿ ವಹಿಸಿಕೊಂಡಿದ್ದರು. ಕಳೆದ ಕೆಲ ತಿಂಗಳುಗಳಿಂದ ಖಾಲಿ ಇದ್ದ ಉಪನೋಂದಣಾಧಿಕಾರಿ ಸ್ಥಾನವು ನಿವೇದಿತಾ ಅವರ ಬರುವಿಕೆಯಿಂದ ಪೂರ್ಣಗೊಂಡಿದೆ.
ಅಧಿಕಾರ ಸ್ವೀಕರಿಸಿದ ಬಳಿಕ ಕಚೇರಿ ಸಿಬ್ಬಂದಿಗಳೊಂದಿಗೆ ಚರ್ಚಿಸಿದ ನೂತನ ಅಧಿಕಾರಿ, ನಿಯಮಾನುಸಾರ ಕಡತಗಳ ವಿಲೇವಾರಿ ಮಾಡಲು ಸೂಚನೆ ನೀಡಿದರು. ಸಾರ್ವಜನಿಕರಿಂದ ಯಾವುದೇ ದೂರುಗಳು ಬರದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆ ತಿಳಿ ಹೇಳಿದರು.
ಸಹಾಯಕ ಅಧಿಕಾರಿ ಮಹಾಂತೇಶ್, ಸಿಬ್ಬಂದಿಗಳಾದ ಶರಣಮ್ಮ, ಚಂದ್ರು, ಅಮರೇಶ, ಬಸವರಾಜ, ಜೀವ, ಅಬ್ದುಲ್ ರಹಮಾನ್ ಸೇರಿದಂತೆ ಇತರರು ಇದ್ದರು.