ಸಿರುಗುಪ್ಪ:ತಾಲೂಕಿನ ಎಂ. ಸೂಗೂರು ಗ್ರಾಮದ 3ನೇ ವಾರ್ಡಿನಲ್ಲಿ ಕ್ಷೌರಿಕ ಅಂಗಡಿ ತಗಿಯುವುದಕ್ಕೆ ಅನುಮತಿ ಮಾಡಿಕೊಡುವಂತೆ ಒತ್ತಾಯಿಸಿ ದಲಿತ ಯುವಕರು ಗ್ರಾ ಪಂ ಪಿಡಿಒ ಮತ್ತು ಅಧ್ಯಕ್ಷ ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಲಿತ ಯುವಕರು ಮಾತನಾಡಿ, ಸುಮಾರು 8 ವರ್ಷ ಗಳಿಂದ ದಲಿತ ಕೆರಿಯಲ್ಲಿ ಕಟಿಂಗ್ ಶಾಪ್ ಇಲ್ಲದೆ ಬಯಲು ಬಹಿರ್ದೆಸೆ ಜಾಗದಲ್ಲಿ ಕಟಿಂಗ್ ಮಾಡಿಕೊಂಡು ಹೋಗುತ್ತಿದ್ದು, ಇದರಿಂದ ದಲಿತರಿಗೆ ಸರಿಯಾದ ಅನುಕೂಲತೆ ಇಲ್ಲದಾಗಿದೆ. ಆದ್ದರಿಂದ ಇನ್ನೂ ಕಟಿಂಗ್ ಅಂಗಡಿ ಅಲ್ಲದೆ ಇನ್ನೂ ಇತರೆ ಸರದಿ ಅಂಗಡಿ ಮತ್ತು ಅಗತ್ಯ ವಸ್ತುಗಳ ಅಂಗಡಿಗಳ ಅವಶ್ಯಕತೆ ಇದ್ದು ಅವುಗಳಿಗೆ ಅನುಕೂಲ ಮಾಡಿಕೊಡಬೇಕು. ಪ್ರತಿಯೊಂದು ಕೆಲಸದಲ್ಲಿ ದಲಿತರು ವಂಚಿತಗೊಂಡಿದ್ದು, ಇದರಿಂದ ದಲಿತ ಸಮುದಾಯದ ಸಾರ್ವಜನಿಕರು ತಮ್ಮ ಕೇರಿಯಲ್ಲೆ ಕೆಲಸಗಳನ್ನು ಪೂರೈಸಿ ಕೊಳ್ಳುವುದಕ್ಕೆ ತುಂಬಾ ಅನುಕೂಲ ವಾಗಲಿದೆ ಆದ್ದರಿಂದ ಕೂಡಲೇ ದಲಿತರ ಈ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಪಿಡಿಒ ಯಮನೂರಪ್ಪ ಕಬ್ಬಣ್ಣನ್ನವರ್ ಮಾತನಾಡಿ, ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತಂದು 15 ದಿನದೊಳಗೆ ನಿಮ್ಮ ಬೇಡಿಕೆಗಳನ್ನು ಈಡೇರಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.