ಬಳ್ಳಾರಿ: ಬಳ್ಳಾರಿ ಜಿಲ್ಲೆಯ 2020-21ನೇ ಸಾಲಿನ ಮುಂಗಾರು ಹಂಗಾಮಿನ ಪಿಎಂಎಫ್‍ಬಿವೈ ಬೆಳೆ ವಿಮೆ ನೊಂದಾಯಿಸಿದ 3350 ರೈತರ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ.359.71 ಲಕ್ಷ ಜಮೆಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಯೋಜನೆಯಡಿ ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳಾದ ಮೆಕ್ಕೆಜೋಳ ಬೆಳೆಗೆ ವಿಮೆ ಮಾಡಿಸಿದ ಹಗರಿಬೊಮ್ಮನಹಳ್ಳಿ (ಮುತ್ಕೂರ್, ಮರಬ್ಬಿಹಾಳ್, ಹಂಪಸಾಗರ, ಹಲವಾಗಲು), ಹರಪನಹಳ್ಳಿ (ಚೆಟ್ನಿಹಳ್ಳಿ, ತೌಡೂರು, ಯಡಿಹಳ್ಳಿ, ಹಡಗಲಿ (ಉತ್ತಂಗಿ ಮತ್ತು ಕಾಲ್ವಿ ಪಶ್ಚಿಮ) ಮತ್ತು ಕೂಡ್ಲಿಗಿ (ಉಜ್ಜಿನಿ, ತೂಲಹಳ್ಳಿ, ಹಾಳ್ಯ, ನಿಂಬಳಗೆರೆ, ನಾಗರಕಟ್ಟೆ) ಹಾಗೂ ಗ್ರಾಮ ಪಂಚಾಯತಿ ಮಟ್ಟದ ಭತ್ತ ಬೆಳೆ ವಿಮೆ ಮಾಡಿಸಿದ ಬಳ್ಳಾರಿ (ರೂಪನ ಗುಡಿ, ಹಲಕುಂದಿ, ಶ್ರೀಧರಗಡ್ಡ, ಕೊರ್ಲಗುಂದಿ, ಬೆಳಗಲ್ಲು, ಸಂಗನಕಲ್ಲು), ಸಿರುಗುಪ್ಪ (ಬಗ್ಗೂರು, ಕೊಂಚಿಗೇರಿ, ಕರೂರು, ಸಿರುಗುಪ್ಪ ನಗರ) ಮತ್ತು ಹೊಸಪೇಟೆ (ಡಣಾ ನಾಯಕನಕೆರೆ, ಡಣಾಪುರ, ರಾಮಸಾಗರ, ನಾಗಲಾಪುರ, ಹೊಸೂರು) ಹಾಗೂ ಹೋಬಳಿ ಮಟ್ಟದ ಬೆಳೆಗಳಾದ ಈರುಳ್ಳಿ, ಕೆಂಪು ಮೆಣಸಿನಕಾಯಿ, ಶೇಂಗಾ, ಉರುಳಿ, ಹತ್ತಿ, ತೊಗರಿ, ಸೂರ್ಯಕಾಂತಿ, ನವಣೆ, ರಾಗಿ, ಭತ್ತ, ಮೆಕ್ಕೆಜೋಳ, ಸಜ್ಜೆ ಬೆಳೆಗಳಿಗೆ ವಿಮೆ ಮಾಡಿಸಿದ ರೈತರಿಗೆ ಪರಿಹಾರ ವಿತರಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಬಳ್ಳಾರಿ ತಾಲೂಕಿನ 72 ರೈತರಿಗೆ ರೂ.7.03 ಲಕ್ಷ, ಹಡಗಲಿಯ 43 ರೈತರಿಗೆ ರೂ.14.03 ಲಕ್ಷ, ಹಗರಿಬೊಮ್ಮನಹಳ್ಳಿ 69 ಜನ ರೈತರಿಗೆ ರೂ.5.98 ಲಕ್ಷ, ಹರಪನಹಳ್ಳಿ 907 ರೈತರಿಗೆ ರೂ. 89.36 ಲಕ್ಷ, ಹೊಸಪೇಟೆ 32 ರೈತರ ರೂ. 2.06 ಲಕ್ಷ, ಕೊಟ್ಟೂರು 102 ರೈತರಿಗೆ ರೂ. 20.17 ಲಕ್ಷ, ಕೂಡ್ಲಿಗಿ 1902 ರೈತರಿಗೆ ರೂ.210.63 ಲಕ್ಷ, ಕುರುಗೋಡು 16 ರೈತರಿಗೆ ರೂ. 1.27 ಲಕ್ಷ, ಸಂಡೂರು 27 ರೈತರಿಗೆ ರೂ.3.07 ಲಕ್ಷ, ಸಿರುಗುಪ್ಪ 180 ರೈತರಿಗೆ ರೂ. 6.09 ಲಕ್ಷ ಜಮೆ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತಾಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಹೋಬ ಳಿಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.