ವಿಶ್ವ ಯುವ ಕೌಶಲ್ಯ ದಿನಾಚರಣೆ : ಗೂಗಲ್ ಮೀಟ್ ವಿಡಿಯೋ ಕಾರ್ಯಕ್ರಮ ಯಶಸ್ವಿ

Share and Enjoy !

Shares
Listen to this article

ಕೊಪ್ಪಳ: ವಿಶ್ವ ಯುವ ಕೌಶಲ್ಯ ದಿನಾ ಚರಣೆ ಅಂಗವಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋ ಪಾಯ ಇಲಾಖೆ (ಜಿಲ್ಲಾಧಿಕಾರಿಗಳ ಕಾರ್ಯಾಲಯ) ಜಿಲ್ಲಾ ಕೌಶಲ್ಯ ಮಿಷನ್ ಕಾರ್ಯಾಲಯದಲ್ಲಿ ಗುರು ವಾರದಂದು ಗೂಗಲ್ ಮೀಟ್ ವಿಡಿ ಯೋ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. 2016-17ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದಲ್ಲಿ ನೂತನವಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸೃಜಿಸಲು ಘೋಷಿಸಲಾಗಿತ್ತು. ಉದ್ಯೋಗವಕಾಶ ಹೆಚ್ಚಿಸುವ ಏಕೈಕ ಉದ್ದೇಶದಿಂದ ಎಲ್ಲ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಒಂದೇ ಇಲಾಖೆಯಡಿಯಲ್ಲಿ ತರಲು ಉದ್ದೇಶಿಸಿದ್ದು, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯನ್ನು ಸೃಜಿಸಲಾಯಿತು.
ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾಡಳಿತ ಭವನ, ಜಿಲ್ಲಾ ಕೌಶಲ್ಯ ಮಿಷನ್, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಯುವ ಕೌಶಲ್ಯ ದಿನ”ದ ಅಂಗವಾಗಿ ನಡೆದ ಗೂಗಲ್ ಮೀಟ್ ವಿಡಿಯೋ ಕಾರ್ಯಕ್ರಮದಲ್ಲಿ 18 ರಿಂದ 35 ವರ್ಷ ದೊಳಗಿನ ಯುವಕ ಮತ್ತು ಯುವತಿಯರಿಗೆ ತಮ್ಮ ಕೌಶಲ್ಯ ವನ್ನು ಹೆಚ್ಚಿಸಲು ಅಗತ್ಯ ಕೌಶಲ್ಯ ಮತ್ತು ಪರಿಣಿತಿಯನ್ನು ಪಡೆದುಕೊಳ್ಳಲು ಹಾಗೂ ರಾಜ್ಯದಲ್ಲಿನ ಎಲ್ಲಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ನಿಯಂತ್ರಣ, ಪ್ರಮಾಣೀಕರಣ, ಪ್ರಚಾರ, ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ,
ಸುಧಾರಿತ ಕೌಶಲ್ಯ ಜ್ಞಾನ ಮತ್ತು ರಾಷ್ಟ್ರೀಯ, ಅಂತ ರಾಷ್ಟ್ರೀಯ ಮಟ್ಟದಲ್ಲಿ ಗುರಿತಿ ಸಲ್ಪಟ್ಟವಿದ್ಯಾರ್ಹತೆಗಳಿಂದ ಯೋಗ್ಯವಾದ ಕೆಲಸ ಮತ್ತು ಲಾಭದಾಯಕ ಉದ್ಯೋಗದ ಪ್ರವೇಶವನ್ನು ಪಡೆದುಕೊಳ್ಳಲು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ರಾಜ್ಯದ ಸ್ಪರ್ಧಾತ್ಮಕತೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ಕಲಿಯಲು ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂಬ ಮಾಹಿತಿಯನ್ನು ಈ ಕಾರ್ಯಕ್ರಮದ ಮುಖಾಂತರ ಯುವಕ ಹಾಗೂ ಯುವತಿಯರಿಗೆ ಕಿರು ಪರಿಚಯ ಹಾಗೂ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವ ಕುರಿತು ಜಾಗೃತಿ ಮೂಡಿಸುವುದರ ಮೂಲಕ ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲಾಯಿತು ಎಂದು ಕೊಪ್ಪಳ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share and Enjoy !

Shares