ವಿಜಯನಗರ ವಾಣಿ
ಓಲಾ ಎಲೆಕ್ಟ್ರಿಕ್ ಸಿಇಒ ಭವಿಷ್ ಅಗರ್ವಾಲ್ ಶನಿವಾರದಂದು ಘೋಷಣೆ ಮಾಡಿರುವ ಪ್ರಕಾರ, ಲಾಂಚ್ಗೆ ಪೂರ್ವವಾಗಿ ಬುಕ್ಕಿಂಗ್ ಆರಂಭವಾದ ಕೇವಲ 24 ಗಂಟೆಯೊಳಗಾಗಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ 1 ಲಕ್ಷ ಬುಕ್ಕಿಂಗ್ ಪಡೆದಿದೆ. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಪ್ರೀ ಬುಕ್ಡ್ ಸ್ಕೂಟರ್ ಎಂಬ ಅಗ್ಗಳಿಕೆ ಪಡೆದಿದೆ. ಜುಲೈ 15ನೇ ತಾರೀಕಿನಂದು ಓಲಾ ಎಲೆಕ್ಟ್ರಿಕ್ನಿಂದ ಬುಕ್ಕಿಂಗ್ ಆರಂಭವಾದ ಬಗ್ಗೆ ಘೋಷಣೆ ಮಾಡಲಾಯಿತು. ಟೋಕನ್ ಮೊತ್ತ ರೂ. 499ರೊಂದಿಗೆ ಅಧಿಕೃತ ವೆಬ್ಸೈಟ್ನಲ್ಲಿ ಶುರು ಮಾಡಿತು. ಭಾರತದ ಎಲೆಕ್ಟ್ರಿಕ್ ವಾಹನದ ಕ್ರಾಂತಿಯು ಸ್ಫೋಟಕ ಆರಂಭವನ್ನು ಪಡೆದುಕೊಂಡಿದೆ. 1,00.000+ ಕ್ರಾಂತಿಕಾರಿಗಳು ಯಾರು ಸೇರ್ಪಡೆಯಾದರೋ ಮತ್ತು ತಮ್ಮ ಸ್ಕೂಟರ್ ಬುಕ್ ಮಾಡಿದರೋ ಅವರಿಗೆಲ್ಲ ದೊಡ್ಡ ಧನ್ಯವಾದ ಎಂದು ಭವಿಷ್ ಅಗರ್ವಾಲ್ ಹೇಳಿದ್ದಾರೆ.
ನಮ್ಮ ಮೊದಲ ಎಲೆಕ್ಟ್ರಿಕ್ ವಾಹನಕ್ಕೆ ಭಾರತದಾದ್ಯಂತ ಕಂಡುಬಂದಿರುವ ಗ್ರಾಹಕರ ಅದ್ಭುತ ಪ್ರತಿಕ್ರಿಯೆಗೆ ನನಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಈ ಹಿಂದೆಂದೂ ಕಾಣದಂಥ ಬೇಡಿಕೆ ಕಂಡುಬಂದಿರುವುದು ಗ್ರಾಹಕರ ಆದ್ಯತೆಯು ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಗಿದ್ದರ ಸ್ಪಷ್ಟ ಸೂಚನೆ ಇದು. ವಿಶ್ವವನ್ನು ಸುಸ್ಥಿರ ಮೊಬಿಲಿಟಿ ಕಡೆಗೆ ಕರೆದೊಯ್ಯಬೇಕು ಎಂಬ ನಮ್ಮ ಮಿಷನ್ನಲ್ಲಿ ಇದು ಅತಿ ದೊಡ್ಡ ಹೆಜ್ಜೆ. ಓಲಾ ಸ್ಕೂಟರ್ ಬುಕ್ ಮಾಡಿದ ಹಾಗೂ ಎಲೆಕ್ಟ್ರಿಕ್ ವಾಹನದ ಕ್ರಾಂತಿಗೆ ಸೇರ್ಪಡೆಯಾದ ಎಲ್ಲರಿಗೂ ಧನ್ಯವಾದ. ಇದು ಕೇವಲ ಆರಂಭ!, ಎಂದು ಭವಿಷ್ ಅಗರ್ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ತಿಂಗಳ ಕೊನೆಯ ಭಾಗದಲ್ಲಿ ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಆರಂಭ ಆಗುವ ಸಾಧ್ಯತೆ ಇದೆ. ಕಂಪೆನಿ ಹೇಳಿಕೊಂಡಿರುವಂತೆ, ಈ ಸ್ಕೂಟರ್ನ ಬೂಟ್ ಸ್ಪೇಸ್ ಬೆಸ್ಟ್ ಆಗಿರುತ್ತದೆ. ಇದರ ಜತೆಗೆ ಕೀರಹಿತವಾಗಿ ಅನುಭವಕ್ಕೆ ಈ ಸ್ಕೂಟರ್ನಕ್ಕು ಆ್ಯಪ್ ಆಧಾರಿತವಾದ ಕೀ ಬರುತ್ತದೆ. ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಆರಾಮದಾಯಕವಾದ ಆಸನದೊಂದಿಗೆ ಬರಲಿದೆ ಎಂದು ಓಲಾ ಹೇಳಿದೆ. ಸ್ಕೂಟರ್ “ಸೂಪರ್ ಕಾರ್ನರಿಂಗ್” ಸಾಮರ್ಥ್ಯ ಮತ್ತು “ಕ್ಲಾಸ್- ವೇಗ ವರ್ಧನೆ”ಯೊಂದಿಗೆ ಬರಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.