ಜಾಗೃತಿಯ ಕಿಡಿ ಹಚ್ಚಿರುವ ಸಂಚಾರಿ ವಿಜಯ್‌ ಅಂಗಾಂಗ ದಾನದ ಪರಿ!

ವಿಜಯನಗರ ವಾಣಿ

ನಟ ಸಂಚಾರಿ ವಿಜಯ್‌ ಇದ್ದಿದ್ದರೆ ಇಂದು ಅವರಿಗೆ 38 ವರ್ಷ ಪೂರ್ಣಗೊಳ್ಳುತ್ತಿತ್ತು. ಇದ್ದಾಗ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಲೇ ಇದ್ದ ವಿಜಯ್‌ ಅವರ ಅಂಗದಾನ ಮಾಡುವ ಮೂಲಕ ಅವರ ಜೀವನದ ಸಾರ್ಥಕತೆ ಹೆಚ್ಚಿಸುವ ಕೆಲಸವಾಗಿದೆ. ಇದಕ್ಕಾಗಿ ವಿಜಯ್‌ ಹೆಸರಿನಲ್ಲಿ ರಾಜ್ಯ ಸರ್ಕಾರದ ‘ಜೀವಸಾರ್ಥಕತೆ’ಯಿಂದ ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ. ವಿಜಯ್‌ ಅಂಗಾಂಗ ದಾನ ಈಗ ಅದ್ಭುತವಾಗಿ ಕೆಲಸ ಮಾಡಿದೆ. ಇದು ನೂರಾರು ಜನರಿಗೆ ಅಂಗಾಂಗ ದಾನ ಮಾಡಲು ಸ್ಫೂರ್ತಿ ನೀಡಿದೆ ಎಂದು ಜೀವಸಾರ್ಥಕತೆಯ ಚೀಫ್‌ ಕೋ-ಆರ್ಡಿನೇಟರ್‌ ಲಿಜಾಮೋಲ್‌ ಜೋಸೆಫ್‌ ಹೇಳಿದ್ದಾರೆ.

‘ವಿಜಯ್‌ ಅಂಗಾಂಗ ದಾನದ ನಂತರ ಟ್ರೆಮಂಡಸ್‌ ರೆಸ್ಪಾನ್ಸ್‌ ಸಿಕ್ಕಿದೆ. ಆನ್‌ಲೈನ್‌ ಮೂಲಕ ತಮ್ಮ ಅಂಗಾಂಗವನ್ನು ದಾನ ಮಾಡಲು ಸಿದ್ಧವಿರುವವರು ನೋಂದಾಯಿಸಿಕೊಳ್ಳುತ್ತಿದ್ದಾರೆ. ಆರ್ಗನ್‌ ಪ್ಲೆಜ್‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. 20 ದಿನಗಳಲ್ಲಿಆನ್‌ಲೈನ್‌ನಲ್ಲಿಯೇ 230 ಮಂದಿ ತಮ್ಮ ಆರ್ಗನ್‌ ಪ್ಲೆಜ್‌ ಮಾಡಿದ್ದಾರೆ’ ಎಂದಿದ್ದಾರೆ ಲಿಜಾಮೋಲ್‌ ಜೋಸೆಫ್‌.

ಸಾಮಾನ್ಯವಾಗಿ ಜೀವಸಾರ್ಥಕತೆ ಸಿಬ್ಬಂದಿ ಊರುಗಳಿಗೆ ತೆರಳಿ ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುತ್ತಾರೆ. ಹೀಗೆ ಅರಿವು ಮೂಡಿಸಿದಾಗ ಜನರು ತಮ್ಮ ಅಂಗಾಂಗ ಮಾಡುವ ವಾಗ್ದಾನ ಮಾಡುತ್ತಾರೆ. ಆದರೆ, ಆನ್‌ಲೈನ್‌ನಲ್ಲಿಈ ಸಂಖ್ಯೆ ಕಡಿಮೆ ಎನ್ನಬಹುದು.

ಲಂಕೆ ಪೋಸ್ಟರ್ ರಿಲೀಸ್:

ಶೇ. 30ರಷ್ಟು ಚಿತ್ರೀಕರಣವೂ ಮುಗಿದಿತ್ತು. ಬಿಗ್‌ ಬಜೆಟ್‌ನ ಈ ಸಿನಿಮಾಗೆ ವಿಎಫ್‌ಎಕ್ಸ್‌ ತಂತ್ರಜ್ಞಾನ ಮತ್ತು ಅನಿಮೇಷನ್‌ ಬಳಸಲಾಗುತ್ತಿದೆ. ಈಗ ಚಿತ್ರತಂಡ ವಿಜಯ್‌ ಹುಟ್ಟುಹಬ್ಬದಂದು ‘ಸೈಲೆಂಟ್‌ ಸ್ಟಾರ್‌’ ಬಿರುದು ನೀಡಿ ಗೌರವಿಸಲು ನಿರ್ಧರಿಸಿದೆ. ಇದರ ಜತೆ ‘ಪಿರಂಗಿಪುರ’ ಚಿತ್ರದಲ್ಲಿ ವಿಜಯ್‌ ಪಾತ್ರ ಪರಿಚಯದ ವಿಡಿಯೋ ಒಂದನ್ನು ರಿಲೀಸ್‌ ಮಾಡುತ್ತಿದೆ. ವಿಜಯ್‌ ಮಾಡಬೇಕಿದ್ದ ಪಾತ್ರಕ್ಕಾಗಿ ಬೇರೆ ನಟನನ್ನು ಹುಡುಕಬೇಕಿದೆ. ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ.

ಲಂಕೆ ಪೋಸ್ಟರ್‌:

ರಾಮ್‌ ಪ್ರಸಾದ್‌ ನಿರ್ದೇಶನದ, ನಟ ಯೋಗಿಶ್‌ ನಟನೆಯ ‘ಲಂಕೆ’ ಚಿತ್ರದಲ್ಲಿ ವಿಜಯ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಂಚಾರಿ ಹುಟ್ಟುಹಬ್ಬಕ್ಕೆ ಈ ಚಿತ್ರದಲ್ಲಿ ಅವರ ಲುಕ್‌ನ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ. ಪೋಸ್ಟರ್‌ ಕುತೂಹಲ ಕೆರಳಿಸಿದೆ. ಇತ್ತೀಚೆಗೆ ರಿಲೀಸ್‌ ಆಗಿದ್ದ ಚಿತ್ರದ ಮೋಷನ್‌ ಪೋಸ್ಟರ್‌ ಕೂಡ ವೈರಲ್‌ ಆಗಿತ್ತು. ಸಿನಿಮಾ ಪೂರ್ಣಗೊಂಡಿದೆ.

‘ಕಳೆದ ವರ್ಷವೇ ಶೂಟ್‌ ಆಗಬೇಕಿತ್ತು. ವಿಜಯ್‌ ಮತ್ತು ನಾನು ಹಲವು ವರ್ಷಗಳಿಂದ ಸ್ನೇಹಿತರು. ವಿಜಯ್‌ ನಟನೆಯ ‘ಪಾದರಸ’ ಚಿತ್ರ ನಿರ್ದೇಶನ ಮಾಡಿದ್ದೆ. ಅದಾದ ನಂತರ ಮೂರು ಸ್ಟೋರಿಗಳನ್ನು ಮಾಡಿಟ್ಟುಕೊಂಡಿದ್ದೆವು. ‘ಅರ್ಥ’ ಚಿತ್ರವನ್ನು ನಾಲ್ಕೈದು ಭಾಷೆಗಳಲ್ಲಿ ರಿಲೀಸ್‌ ಮಾಡುವ ಪ್ಲಾನ್‌ ಇತ್ತು. ವಿಜಯ್‌ ಕಳೆದುಕೊಂಡಿದ್ದು ದೊಡ್ಡ ನೋವು. ಈಗ ವಿಜಯ್‌ ಬದಲಿಗೆ ಪಾರ್ಥ ನಟಿಸುತ್ತಿದ್ದಾರೆ. ಸುಮನ್‌, ಕಿಶೋರ್‌ ಮತ್ತಿತರ ಜನಪ್ರಿಯ ನಟರು ನಟಿಸಲಿದ್ದಾರೆ’ ಎಂದಿದ್ದಾರೆ ಹೃಷಿಕೇಶ್‌.

ಸೈಲೆಂಟ್‌ ಸ್ಟಾರ್‌ ಬಿರುದು:

ವಿಜಯ್‌ ಬಹಳ ಭರವಸೆ ಇಟ್ಟುಕೊಂಡಿದ್ದ ಇನ್ನೊಂದು ಚಿತ್ರ ‘ಪಿರಂಗಿಪುರ’. ಇದರಲ್ಲಿ ಬಾಲ್ಯದಿಂದ ವೃದ್ಧಾಪ್ಯದವರೆಗೆ ವಿಜಯ್‌ ಮೂರು ಶೇಡ್‌ಗಳಲ್ಲಿ ನಟಿಸಬೇಕಿತ್ತು. ಈ ಕಮರ್ಷಿಯಲ್‌ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್‌ ಆಗಲಿದ್ದು, ಜನಾರ್ದನ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ.

ಜೀವಸಾರ್ಥಕತೆ ವೆಬ್‌ಸೈಟ್‌ ಮೂಲಕ ಆರ್ಗನ್‌ ಪ್ಲೆಜ್‌ ಮಾಡಬಹುದಾಗಿದೆ. ಇದಕ್ಕಾಗಿ ಕ್ಯೂಆರ್‌ ಕೋಡ್‌ ಅನ್ನೂ ಹೊರತಂದಿದ್ದಾರೆ. ಮೆದುಳು ನಿಷ್ಕಿ್ರಯಗೊಂಡ ನಂತರ ವಿಜಯ್‌ ಅಂಗಾಂಗಗಳನ್ನು ದಾನ ಮಾಡಲಾಯಿತು. ಲಿವರ್‌, ಎರಡೂ ಕಿಡ್ನಿಗಳು, ಹೃದಯನಾಳಗಳು ಮತ್ತು ಕಣ್ಣಿನ ಕಾರ್ನಿಯಾಗಳನ್ನು ದಾನ ಮಾಡಿದ ಪರಿಣಾಮ ಇಂದು 7 ಜೀವಗಳನ್ನು ಉಳಿಸಿದಂತಾಗಿದೆ. ಇದು ಜನರಲ್ಲಿಅಂಗಾಂಗ ದಾನಕ್ಕೆ ಮುಂದಾಗಲು ಸ್ಫೂರ್ತಿ ನೀಡಿದೆ.ವಿಜಯ್‌ ಬದಲಿಗೆ ಬೇರೆ ನಟಸಂಚಾರಿ ವಿಜಯ್‌ ನಟಿಸಬೇಕಿದ್ದ ಸಿನಿಮಾಗಳು ಹಲವು. ಅದರಲ್ಲಿ ಒಂದು ‘ಅರ್ಥ’. ಹೃಷಿಕೇಶ್‌ ಜಂಬಗಿ ನಿರ್ದೇಶನದ ಈ ಚಿತ್ರದಲ್ಲಿ ಪುಟ್ಟ ಬಾಲಕಿ ವಿದ್ಯುತ್‌ ಕಂಬಕ್ಕೆ ಸಿಲುಕಿ ತೊಂದರೆಗೊಳಗಾದಾಗ, ಬಾಲಕಿ ಪರವಾಗಿ ಸರ್ಕಾರದ ವಿರುದ್ಧ ಹೋರಾಡುವ ಲಾಯರ್‌ ಪಾತ್ರದಲ್ಲಿ ನಟಿಸಬೇಕಿತ್ತು ವಿಜಯ್‌. ಕಳೆದ ವರ್ಷ ಮುಹೂರ್ತವನ್ನೂ ಮಾಡಲಾಗಿತ್ತು. ಈಗ ವಿಜಯ್‌ ಬದಲಿಗೆ ಪಾರ್ಥ ಎಂಬ ನಟ ಅಭಿನಯಿಸುತ್ತಿದ್ದಾರೆ.

ಈಗ ವಿಜಯ್‌ ಅಂಗದಾನ ಮಾಡಿದ ಬಳಿಕ ಆನ್‌ಲೈನ್‌ನಲ್ಲಿ ಜನ ತಾವಾಗಿ ಮುಂದೆ ಬಂದು ತಮ್ಮ ಮಿದುಳು ನಿಷ್ಕ್ರಿಯಗೊಂಡರೆ ಅಂಗಾಂಗ ಪಡೆಯಬಹುದು ಎಂದು ಒಪ್ಪಿಗೆ ಸೂಚಿಸಿದ್ದಾರೆ. ಆರ್ಗನ್‌ ಪ್ಲೆಜ್‌ ಬಗ್ಗೆ ಮಾಹಿತಿ ಕೇಳುವವರ ಸಂಖ್ಯೆಯೂ ಹೆಚ್ಚಾಗಿದೆ. ಹಿಂದೆ ನಾವು ಹಲವು ಊರುಗಳಲ್ಲಿ ಜಾಗೃತಿ ಮೂಡಿಸಿದರೆ, ಸುಮಾರು 50 ಮಂದಿ ಅಂಗಾಂಗ ದಾನಕ್ಕೆ ದಾಖಲು ಮಾಡಲು ಒಪ್ಪುತ್ತಿದ್ದರು. ಕೊರೊನಾ ವೈರಸ್ ಬಂದ ನಂತರ ನಾವು ಈ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗಿರಲಿಲ್ಲ. ಆರ್ಗನ್‌ ಪ್ಲೆಜ್‌ ಮಾಡುವುದು ಕಡಿಮೆಯಾಗಿತ್ತು. 2017ರಿಂದ ಇಂದಿನವರೆಗೆ 3,623 ಪ್ಲೆಜ್‌ ಕಾರ್ಡ್‌ಗಳನ್ನು ವಿತರಿಸಿದ್ದೇವೆ’ ಎಂದಿದ್ದಾರೆ ಅವರು.

Share and Enjoy !

Shares