ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಮುಸ್ಲಿಂ ಸಮಾಜದ ತ್ಯಾಗ ಬಲಿದಾನ ಸಂಕೇತವಾಗಿ ಆಚರಿಸುವ ಬಕ್ರೀದ್ ಹಬ್ಬವನ್ನು ಪ್ರತಿಯೊಬ್ಬರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ 19 ಸರಕಾರದ ಆದೇಶ ಪಾಲಿಸಿ ಬಕ್ರೀದ್ ಹಬ್ಬ ಆಚರಣೆ ಮಾಡಿ ಎಂದು ಮಸ್ಕಿ ಸಿಪಿಐ ದೀಪಕ್ ಭೂಸರೆಡ್ಡಿ ಹೇಳಿದರು,
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪೊಲೀಸ್ ಠಾಣೆ ವತಿಯಿಂದ ಬಕ್ರೀದ್ ಹಬ್ಬದ ಅಂಗವಾಗಿ ಪಟ್ಟಣದ ಸಮಾಜದ ಮುಖಂಡರ ಶಾಂತಿ ಸಭೆ ಕರೆದು ಮಾತನಾಡಿದರು,
ಇದೆ ಸಂದರ್ಭದಲ್ಲಿ ಪಿಎಸೈ ಡಾಕೇಶ ಉಪ್ಪಾರ, ಸಿಬ್ಬಂದಿ ಬಾಷಾಸಾಬ ಪೋತ್ನಾಳ, ಪುರಸಭೆ ಸದಸ್ಯ ಅಮೀರ ಬೇಗ ಉಸ್ತಾದ,ಖಾಜಿಸಾಬ, ಸೈಯದಸಾಬ, ಹುಸೇನಸಾಬ, ಗುರುಬಸಪ್ಪ ಸಜ್ಜನ, ಅನ್ವರ ಮೀಯಾ ಕಂದಗಲ್, ವಿರೇಶ ಉಪ್ಪಾರ, ಶರಣಪ್ಪ ಕಟ್ಟಿಮನಿ ದುಲಿಸಾಬ, ಇರ್ಪಾನ್ ಸಾಹೇಬ್, ಸೇರಿದಂತೆ ಮುಂತಾದವರು ಇದ್ದರು,