ವಿಜಯನಗರವಾಣಿ ಸುದ್ದಿ
ರಾಯಚೂರು ಜಿಲ್ಲೆ
ಲಿಂಗಸೂಗೂರು ; ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ತಾಲೂಕಾ ಅಧ್ಯಕ್ಷರು ಮತ್ತು ಜಾಗೀರನಂದಿಹಾಳ ಗ್ರಾಮದ ಸ.ಕಿ.ಪ್ರಾ.ಶಾಲೆಯ.ಎಸ್.ಡಿ.ಎಂ.ಸಿ. ಅಧ್ಯಕ್ಷರು ಲಿಂಗಸುಗೂರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಸುಮಾರು ವರ್ಷಗಳಿಂದ ಶಿಕ್ಷಣ ಇಲಾಖೆಗೆ ಜಾಗಿರನಂದಿಹಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಉನ್ನತಿಕರಣ ಗೊಳಿಸಲು ಮನವಿ ಸಲ್ಲಿಸುತ್ತಾ ಬಂದರೂ ಸಹ ಯಾವುದೇ ರೀತಿಯ ಸ್ಪಂದನೆ ಸಿಕ್ಕಿರುವದಿಲ್ಲ. ಮೂಲತ: ಈ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳಿಲ್ಲದೆ ಎಲ್ಲಾ ಕ್ಷೇತ್ರಗಳಿಂದಲೂ ಈ ಗ್ರಾಮ ವಂಚಿತವಾಗಿದೆ. ಆದರಲ್ಲೂ ಸ್ವತಂತ್ರ: ಬಂದು 75 ವರ್ಷ ಕಳೆದರೂ ಸಹ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಉನ್ನತೀಕರಿಸಲು ಹಿಂದೇಟು ಹಾಕುತ್ತಿದ್ದಾರೆ ಹೀಗೆ ಮುಂದುಡುತ್ತ ಹೋದರೆ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕಳಿಸಬೇಕಾದಂತ ಪರಿಸ್ಥಿತಿ ಬರುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರು ಸೇರಿ ಶೇಕಡಾ 50 ಕ್ಕೂ ಅಧಿಕ ವಿದ್ಯಾರ್ಥಿಗಳು ಇದ್ದು, ಈ ಶಾಲೆಯನ್ನು ಉನ್ನತೀಕರಿಸಲು ಹಿಂದೇಟು ಹಾಕುತ್ತಿರವದೂ.ಖಂಡನೀಯವಾಗಿದೆ.
ಜಾಗಿರನಂದಿಹಾಳ ಗ್ರಾಮದಿಂದ ಸುತ್ತ ಮುತ್ತ 4 ಕಿ.ಮೀ. ಅಂತರದಲ್ಲಿ ಶಾಲೆಗಳು ಇರುವದಿಲ್ಲ
ಮಳೆಗಾಲದಲ್ಲಿ ಸುಮಾರು ಸತತ 3-4 ತಿಂಗಳು ಹಳ್ಳದಲ್ಲಿ ನೀರು ಬರುತ್ತದೆ. ಹಳ್ಳವನ್ನು ವಿದ್ಯಾರ್ಥಿಗಳು.ದಾಟಲು.ಆಗುವದಿಲ್ಲ.
ಶಾಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಅಲ್ಪಸಂಖ್ಯಾಂತ ಶೇಕಡಾ 50 ರಷ್ಟು ಅಧಿಕ.ಮಕ್ಕಳು ಇದ್ದರೆ ಜಾಗಿರನಂದಿಹಾಳ್ ಗ್ರಾಮಕ್ಕೆ ಬಸ್ಸಿನ ಸೌಕರ್ಯಇರುವದಿಲ್ಲ. ಈಸಮಸ್ಯೆಗಳನ್ನು.ಗಮನದಲ್ಲಿಟ್ಟುಕೊಂಡು ಪ್ರಾಥಮಿಕ ಶಾಲೆ ಯನ್ನು ಉನ್ನತೀಕರಿಸಬೇಕೆಂದು ಒತ್ತಾಯಿಸುತ್ತೇವೆ. ಕರ್ನಾಟಕ ರಾಜ್ಯ ರೈತ ಸಂಘ.ಹಾಗೂ ಹಸಿರು ಸೇನೆ ಸಂಘಟನೆಯ ತಾಲ್ಲೂಕು ಅದ್ಯೆಕ್ಷರಾದ ಶಿವಪುತ್ರಗೌಡ ಜಾಗಿರ ನಂದಿಹಾಳ.ಸಂಗಪ್ಪ. ಖಾಜಾವಲಿ ಗಡ್ಡೆಪ್ಪ ಇನ್ನಿತ್ತರರು ಇದ್ದರು.