ವಿಜಯನಗರವಾಣಿ ಸುದ್ದಿ
ಸಿರುಗುಪ್ಪ: ತಾಲೂಕಿನಾದ್ಯಂತ ಉತ್ತಮ ಮಳೆಯಾಗಿರುವುದರಿಂದ ರೈತರು ಬಿತ್ತನೆ ಮಾಡಿದ ಹತ್ತಿ ಸೇರಿ ದಂತೆ ಇತರೆ ಬೆಳೆಗಳು ಬೆಳೆಯಲು ಈ ಮಳೆಯು ಸಹಕಾರಿಯಾಗಿರುತ್ತದೆ. ಹತ್ತಿ, ಸೂರ್ಯಕಾಂತಿ, ಸಜ್ಜೆ ಮತ್ತು ಭತ್ತದ ಸಸಿಮಡಿಗಳು ಉತ್ತಮವಾಗಿ ಬೆಳೆಯಲು ಈ ಮಳೆಯು ಅನು ಕೂಲಮಾಡಿಕೊಟ್ಟಿದ್ದು, 10ದಿನದ ಹಿಂದೆ ಬಿತ್ತನೆಮಾಡಿದ ಹತ್ತಿಯ ಬೆಳವಣಿಗೆಗೆ ಹಾಗೂ ಒಂದು ತಿಂಗಳ ಮುಂಚೆ ಬಿತ್ತನೆ ಮಾಡಿದ ಹತ್ತಿಯ ಬೆಳೆಗೆ ರೈತರು ರಸಗೊಬ್ಬರ ಹಾಕಲು ಈ ಮಳೆಯು ಅನುಕೂಲವಾಗಿದೆ.
ಕಳೆದ 15ದಿನಗಳಿಂದ ಕೈಕೊಟ್ಟಿದ್ದ ಮಳೆಯು ಬುಧುವಾರ ರಾತ್ರಿಯಿಂದ ಗುರುವಾರ ಉತ್ತಮವಾಗಿ ಸುರಿದಿದ್ದರಿಂದ ನಗರ ಸೇರಿದಂತೆ ಹಚ್ಚೊಳ್ಳಿ, ತೆಕ್ಕಲಕೋಟೆ, ಕರೂರು, ಸಿರುಗುಪ್ಪ, ಹೋಬಳಿಗಳ ವ್ಯಾಪ್ತಿಯಲ್ಲಿ ಬಿತ್ತನೆ ಮಾಡಿದ ಬೆಳೆಗಳು ನಳನಳಿಸುತ್ತಿವೆ. ಅಲ್ಲದೆ ರೈತರು ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳಲ್ಲಿ ನೀರು ಸಂಗ್ರಹವಾಗಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಹೊಂಡದಲ್ಲಿ ಸಂಗ್ರಹವಾದ ನೀರಿನಿಂದ ಬೆಳೆ ಬೆಳೆಯಲು ಅನುಕೂಲವಾಗುತ್ತದೆ.
ತಾಲೂಕಿನಲ್ಲಿ ಸುಮಾರು 20ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಕಾರ್ಯ ಮುಗಿದಿದ್ದು, ಮೆಕ್ಕೆಜೋಳ, ಸೂರ್ಯಕಾಂತಿ ಬಿತ್ತನೆಯು ಆಗಿದೆ, ಸುಮಾರು ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಸಸಿಯನ್ನು ನಾಟಿಮಾಡಲಾಗಿದೆ, ನಿನ್ನೆ ಮತ್ತು ಇಂದು ಸುರಿದ ಮಳೆಯು ರೈತರ ಬೆಳೆಗಳಿಗೆ ಅನುಕೂಲಮಾಡಿಕೊಟ್ಟಿದೆ ಎಂದು ಸಹಾ ಯಕ ಕೃಷಿ ನಿರ್ದೇಶಕ ನಜೀರ್ ಅಹಮ್ಮದ್ ತಿಳಿಸಿದ್ದಾರೆ.