ವರದೇಂದ್ರ ತೀರ್ಥರ ಬೃಂದಾವನ ಅಭಿವೃದ್ಧಿ ಪಡಿಸಲಾಗುವುದು

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ಸಿರುಗುಪ್ಪ: ತಾಲೂಕಿನ ಕೆಂಚನಗುಡ್ಡ ಗ್ರಾಮದ ತುಂಗಭದ್ರ ನದಿ ತೀರದಲ್ಲಿರುವ ಸ್ರೀ ವರದೇಂದ್ರರ ಬೃಂದಾವನ ಸ್ಥಳಕ್ಕೆ ಶ್ರೀ ಕ್ಷೇತ್ರ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಶ್ರೀಗಳು ಕೆಂಚನಗುಡ್ಡ ಗ್ರಾಮದ ತುಂಗಭದ್ರ ನದಿ ತೀರದಲ್ಲಿ ಜಗದ್ಗುರು ಮಧ್ವಚಾರ್ಯ ಪೀಠದ ಮೂಲ ಗುರುಗಳಾದ ಶ್ರೀ ವರದೇಂದ್ರ ಸ್ವಾಮಿಗಳ ವಿಶೇಷ ಕಾರ್ಯಕ್ಷೇತ್ರವಾಗಿದ್ದು, ಅಲ್ಲದೆ ಇದು ಇವರ ಗುರುಗಳಾದ ವಸುದೇಂಧ್ರ ತೀರ್ಥರ ಸನ್ನಿಧಾನವಾಗಿದ್ದು, ಏಕಾಂತವಾಗಿ ಜಪ ತಪಾಥಿ ಅನುಷ್ಠಾನಗಳನ್ನು ಗುರುಗಳು ಏಕಾಂತವಾಗಿ ಮಾಡುತ್ತಿದ್ದರು ಎನ್ನುವ ಬಗ್ಗೆ ನಮ್ಮ ಮಂತ್ರಾಲಯ ಮಠದಲ್ಲಿ ಎಲ್ಲಾ ಪೂರಕ ದಾಖಲೆಗಳು ಲಭ್ಯವಿವೆ.
ಇಲ್ಲಿ ಗುರುಗಳಿಂದಲೇ ಪ್ರತಿಷ್ಠಾಪಿತವಾಗಿರುವ ಶ್ರೀರಾಮಚಂದ್ರ ದೇವರು ಮುಖ್ಯ ಪ್ರಾಣದೇವರು ಮತ್ತು ಮಹಾರುದ್ರದೇವರ ಸನ್ನಿಧಾನವಾಗಿದೆ. ಗುರುಗಳು ರುದ್ರಾಕ್ಷ ಸಂಭೂತರಾಗಿರತಕ್ಕಂತವರಾಗಿದ್ದರು, ಶ್ರೀ ವರದೇಂದ್ರ ತೀರ್ಥರು ಇಲ್ಲಿ ಅನುಷ್ಠಾನ ಮಾಡುತ್ತಿದ್ದ ಸ್ಥಳವಾಗಿದೆ, ಇದು ಕಾಲ ಗರ್ಭದಲ್ಲಿ ಅತ್ಯಂತ ಶೀಥಿಲಾವಸ್ಥೇ ಸೇರಿದೆ, ಇಲ್ಲಿ ಹಿಂದೆ ಉತ್ತಮವಾದ ಸ್ನಾನಗಟ್ಟ ಮತ್ತು ಅನುಷ್ಠಾನ ಮಾಡಲು ಯೋಗ್ಯವಾದ ಮಠ ಇತ್ತು, ಇದನ್ನು ಶ್ರೀಮಠದಿಂದ ಅಭಿವೃದ್ಧಿ ಮಾಡಲಾಗುವುದು.
ಮಠದ ಎಲ್ಲಾ ಶಿಷ್ಯರು ಸ್ಥಾನಿಕ ಅಧಿಕಾರಿಗಳು ಮತ್ತು ಶಾಸಕರ ಸಹಯೋಗದೊಂದಿಗೆ ಮುಂಬರುವ ದಿನಗಳಲ್ಲಿ ಈ ಸ್ಥಳವನ್ನು ಜೀರ್ಣೋಧ್ದಾರ ಮಾಡಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಲು ಮತ್ತು ಆಚರಿಸಲು ವಿಶೇಷವಾದ ಸೌಕರ್ಯಗಳನ್ನು ಕಲ್ಪಿಸಿಕೊಡುವ ಉದೇಶದಿಂದ ಶ್ರೀ ವರದೇಂದ್ರ ಸ್ವಾಮಿಗಳ ಆರಾಧನೆಗೆ ಶಿಷ್ಯರೊಂದಿಗೆ ಆಗಮಿಸಿದ್ದು, ಅವರ ದರ್ಶನ ಭಾಗ್ಯ ಪಡೆದಿದ್ದೇವೆಂದು ಸ್ವಾಮಿಗಳು ತಿಳಿಸಿದರು. ಭಕ್ತರಾದ ರಾಘವೇಂದ್ರ ಕುಲಕರ್ಣಿ, ಸಂಜಯ್, ಶ್ರೀಕಾಂತ, ವೆಂಕಟೇಶ ಆಚಾರಿ ಮತ್ತು ಮಠದ ಭಕ್ತರು ಇದ್ದರು.

Share and Enjoy !

Shares