ಸಮಸ್ಯೆಗಳ ಇತ್ಯಾರ್ಥಕ್ಕೆ ಸಂಘಟನೆ ನಿಂತ ನಿರಿನಂತೆ ಆಗದೆ ಮುಂದೆ ಸಾಗುವಂತಾಗಬೇಕು : ಸುಗ್ಗನಹಳ್ಳಿ ರಮೇಶ್

Share and Enjoy !

Shares
Listen to this article

ಕುರುಗೋಡು. ಜು.18

ಸಮೀಪದ ಬೈಲೂರ್ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಪರುಶುರಾಮ್ ನೀಲನಾಯಕ್ ಬಣ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಪೂರ್ವ ಬಾವಿ ಸಭೆ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಮೇಶ್ ಸುಗ್ಗನಹಳ್ಳಿ ಅವರು, ಒಂದು ಸಂಘಟನೆ ಯಿಂದ ಗ್ರಾಮಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿ ಕೊಳ್ಳಬಹುದು. ಜ್ಯಾತಾತಿತತೆ, ನಿರುದ್ಯೋಗ, ಬಡತನ, ಅನಕ್ಷರತೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಹೋಗಲಾಡಿಸಲು ಪೂರಕವಾಗಲಿದೆ ಎಂದರು.

ಆದ್ದರಿಂದ ಪ್ರತಿಯೊಬ್ಬರೂ ಸಂಘಟನೆಗನ್ನು ಬೆಳಸಿ ಉಳಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.

ಇನ್ನೂ ಹಲವು ಕಡೆ ದಲಿತರ ಮೇಲೆ ಕೊಲೆ, ದಬ್ಬಾಳಿಕೆ, ಅತ್ಯಾಚಾರಗಳು ನಡೆಯುತ್ತಿವೆ ಅವುಗಳ ತಡೆಗೆ ಸಂಘಟನೆ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.

ಅದಲ್ಲದೆ ಕೊರೊನಾ 3ನೇ ಅಲೆ ಪ್ರಾರಂಭವಾಗಿ ಮತ್ತೆ ಲಾಕ್ ಡೌನ್ ಆಗುವ ಸಾಧ್ಯತೆ ಇದೆ ಇದರ ಮದ್ಯೆ ಸಂಘಟನೆ ಕಟ್ಟಿ ಉಳಿಸಿಕೊಂಡು ಹೋಗಬೇಕಾಗಿದೆ. ಅದರ ಜೊತೆಗೆ ಪ್ರತಿಯೊಂದು ದಲಿತರ ಸಮಸ್ಯೆಗಳಿಗೆ ಸ್ಪಂದಿಸಿಕೊಂಡು ಹೋಗಬೇಕಾಗಿದೆ ಎಂದರು.

ಇದಲ್ಲದೆ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಇದಕ್ಕೆ ಗ್ರಾಮ ಮಟ್ಟದಿಂದ ಹಾಗೂ ತಾಲೂಕು ಮಟ್ಟದಿಂದ ಹೆಚ್ಚಿನ ಸಂಖ್ಯೆ ಯಲ್ಲಿ ಸಂಘಟನೆಯ ಪದಾಧಿಕಾರಿಗಳು ಆಗಮಿಸಿ ಯಶಸ್ವಿ ಗೊಳಿಸಬೇಕೆಂದು ಕರೆ ನೀಡಿದರು.

ಮುಂದಿನ ವರ್ಷಗಳಲ್ಲಿ ಬೌದ್ಧ ಧರ್ಮ ಸಂಪೂರ್ಣ ವಾಗಿ ದೇಶದಲ್ಲಿ ಕಾಣಿಸಿಕೊಳ್ಳಲಿದೆ ಅವಾಗ ಅಂಬೇಡ್ಕರ್ ಯಾರು ಅಂತ ಅರ್ಥ ಪೂರ್ಣ ವಾಗಿ ಗೊತ್ತಾಗಲಿದೆ. ಆದ್ದರಿಂದ ದಲಿತರು ಧರ್ಮ ಪ್ರಿಯಾರಾಗಿ ಪ್ರತಿಯೊಂದು ದಾಖಲಾತಿ ಗಳಲ್ಲಿ ಹೆಸರು ನಮೂದಿಸಿ ಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ  ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಘಟನೆ ಸಂಚಾಲಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿಗಳಾದ ಕಪ್ಪಗಲ್ ಒಂಕರಪ್ಪ, ಸಿ. ಲಿಂಗಪ್ಪ, ಬಳ್ಳಾರಿ ನಾಗರಾಜ್, ಸುಗ್ಗನಹಳ್ಳಿ  ಪರುಶುರಾಮ್, ಖಾದರಲಿಂಗ ಮುದ್ದಟನೂರು ನಾಗರಾಜ್ ಸೇರಿದಂತೆ ಮೋಕಾ ತಾಲೂಕಿನ ಪದಾಧಿಕಾರಿಗಳು ಇದ್ದರು.

 

Share and Enjoy !

Shares