ಮರಳಿ :ರೈತರ ಹಣದಿಂದ ರಸ್ತೆ ದುರಸ್ಥಿ ಕಾರ್ಯ,

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ 

ರಾಯಚೂರು ಜಿಲ್ಲೆ

ಲಿಂಗಸುಗೂರು ತಾಲೂ ಕಿನ ಮುದಗಲ್ ಪಟ್ಟಣ ಸಮೀಪದ ಹೂನೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮರಳಿ ಗ್ರಾಮದ ರೈತರ ಹೊಲಗಳಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟು ಕೆಸರು ಗದ್ದೆಯಂತಾಗಿ  ರೈತರು ಹೊಲಗಳಿಗೆ ಹೋಗಲು ಹರಸಹಾಸ ಪಡುವಂತಾಗಿತ್ತು,

 

ಗ್ರಾಮದ ರೈತರು ಜನಪ್ರತಿನಿಧಿಗಳಿಗೆ ಮತ್ತು ಹೂನೂರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಈ ರಸ್ತೆ ದುರಸ್ಥಿ ಮಾಡುವಂತೆ ಅನೇಕ ಬಾರಿ ಮನವಿ ಮಾಡಿದರೂ ಏನೂ ಪ್ರಯೋಜವಾಗಿಲ್ಲ. ಈ ಹಿನ್ನಲೆಯಲ್ಲಿ ಮರಳಿ ಗ್ರಾಮದ ರೈತರು ಪ್ರತಿ ಮನೆ ಮನೆಗೆ  ಹೋಗಿ ಹಣ ಸೇರಿಸಿಕೊಂಡು  ರಸ್ತೆ ದುರಸ್ಥಿ ಮಾಡಿಕೊಂಡಿದ್ದಾರೆ, 

ಇದೆ ಸಂದರ್ಭದಲ್ಲಿ ಮರಳಿ ಗ್ರಾಮದ ರೈತರಾದ ಕರಿಯಪ್ಪಗೌಡ, ಹನುಮಂತ, ಶರಣಬಸವ, ಬಸವರಾಜ, ಮುತ್ತಣ್ಣ, ಬಸವರಾಜ, ಬಸನಗೌಡ ಮಾಲಿ ಪಾಟೀಲ್, ಸಿದ್ದಪ್ಪ ಅಮರೇಶ, ದೊಡ್ಡಬಸಪ್ಪ, ಹಾಗೂ ಗ್ರಾಮಸ್ಥರು ಇದ್ದರು.

 

Share and Enjoy !

Shares