ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ
ಲಿಂಗಸೂಗೂರು : ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮೊದಲ ದಿನವಾದ ಸೋಮವಾರ ತಾಲ್ಲೂಕಿನಲ್ಲಿ ಸುಗಮವಾಗಿ ನಡೆಯಿತು. ಲಿಂಗಸೂಗೂರು ಶೈಕ್ಷಣಿಕ ತಾಲ್ಲೂಕಿನಲ್ಲಿ 116 ವಿದ್ಯಾರ್ಥಿಗಳು ಗೈರು ಹಾಜರಾದರು.
ಲಿಂಗಸೂಗೂರು ಶೈಕ್ಷಣಿಕ ತಾಲ್ಲೂಕಿನಲ್ಲಿ 5682 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 5566 ಮಂದಿ ಹಾಜರಾದರು. 116 ವಿದ್ಯಾರ್ಥಿಗಳು ಗೈರು ಹಾಜರಾದರು.
ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲಿಸಲಾಯಿತು. ಪರೀಕ್ಷಾ ಅಕ್ರಮ ವರದಿಯಾಗಿಲ್ಲ. ಸುಗಮವಾಗಿ ಪರೀಕ್ಷೆ ನಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಠೋಡ್ ತಿಳಿಸಿದರು