ವಿಜಯನಗರವಾಣಿ ಸುದ್ದಿ : ರಾಯಚೂರು ಜಿಲ್ಲೆ
ಲಿಂಗಸುಗೂರು ;ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ಎಸ್ ಎಸ್ ಹುಲ್ಲೂರು ಅಧ್ಯಕ್ಷತೆಯಲ್ಲಿ ಬಕ್ರೀದ್ ಶಾಂತಿ ಸಭೆ ಜರುಗಿತು.
ಇದೆ ವೇಳೆ ಮಾತನಾಡಿದ ಡಿವೈಎಸ್ಪಿ ಎಸ್ ಎಸ್ ಹುಲ್ಲೂರು ಮುಸ್ಲಿಂ ಸಮಾಜದ ತ್ಯಾಗ ಬಲಿದಾನ ಸಂಕೇತವಾಗಿ ಬಕ್ರೀದ್ ಹಬ್ಬವನ್ನು ಪ್ರತಿಯೊಬ್ಬರು ಮಾಸ್ಕ್ ಹಾಗೂ ಸ್ಯಾನಿಟೈಸರ್ ಮತ್ತು ಅಂತರ ಕಾಯ್ದುಕೊಂಡು ಕೋವಿಡ್-19 ನಿಯಮ ಪಾಲಿಸಿ ಆಚರಣೆ ಮಾಡಬೇಕು. ಈದ್ಗಾದಲ್ಲಿ ಪ್ರಾರ್ಥನೆ ಮಾಡುವಂತಿಲ್ಲ. ಮಸೀದಿಯಲ್ಲಿ ಪ್ರಾರ್ಥನೆ ಮಾಡುವ ವೇಳೆ 50 ಜನ ಕಿಂತ ಕಡಿಮೆ ಇರಬೇಕು. ಮಸೀದಿಯಲ್ಲಿ ಪ್ರಾರ್ಥನೆ ವೇಳೆ ವೃದ್ಧರು, ಮಕ್ಕಳನ್ನು ಸೇರಿಸ ಬಾರದು. 6 ಅಡಿ ಅಂತರ ಕಾಪಡಬೇಕು. ದೇಹದ ಉಷ್ಣತೆ ಅಳತೆ ಮಾಡಿಕೊಂಡು ಮಸೀದಿಯಲ್ಲಿ ಹೋಗಬೇಕೆಂದರು.
ಸಿಪಿಐ ಮಹಾಂತೇಶ ಸಜ್ಜನ, ಪಿಎಸ್.ಐ ಪ್ರಕಾಶ ಡಂಬಳ, ಲಾಲ್ ಮಹ್ಮದ್ ಸಾಬ, ಪಶುವೈದ್ಯಾಧಿಕಾರಿ ರಾಚಪ್ಪ, ಪುರಸಭೆ ಮುಖ್ಯಾಧಿಕಾರಿ ಎಪಿಎಂಸಿ ಅಧ್ಯಕ್ಷ ಮಲ್ಲರೆಡ್ಡಪ್ಪ, ಸೇರಿದಂತೆ ಮುಂತಾದವರು ಇದ್ದರು