ವಿಜಯನಗರವಾಣಿ
ಚಾಂದ್ ಭಾಷಾ ಅಣ್ಣನವರಿಗೆ ಆಯಸ್ಸು, ಆರೋಗ್ಯವು ಸದಾ ಉಸಿರಾಗಿರಲಿ : ಜಿ.ಸುಧಾಕರ
ಕಂಪ್ಲಿ: ಪಟ್ಟಣದ 9ನೇ ವಾರ್ಡಿನ ಕೆಬಿ ಬಳಿಯಲ್ಲಿ ತಮ್ಮನಂತಿರುವ ಜಿ.ಸುಧಾಕರ ಅವರ ನೇತೃತ್ವದಲ್ಲಿ ಅಭಿಮಾನಿ ಬಳಗದವರು ಪುರಸಭೆ ಸದಸ್ಯ ಕೆ.ಎಸ್.ಚಾಂದ್ ಭಾಷಾ ಅವರ 42ನೇ ವರ್ಷದ ಜನ್ಮದಿನಾಚರಣೆ ಇಂದು ಅದ್ಧೂರಿಯಾಗಿ ಆಚರಿಸಿದರು.
ಹುಟ್ಟು ಹಬ್ಬದ ನಿಮಿತ್ಯ ಇಲ್ಲಿ ಚಾಂದ್ ಭಾಷಾ ಅವರ ಮುಖಾಂತರ ದೊಡ್ಡ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಮುಖಂಡ ಜಿ.ಸುಧಾಕರ್ ಮಾತನಾಡಿ, ಹಲವು ವರ್ಷಗಳಿಂದ ಜನರ ಸೇವೆ ಮಾಡುವ ಜತೆಗೆ ಸಂಕಷ್ಟದ ಸಂದರ್ಭದಲ್ಲಿ ಹಲವರಿಗೆ ನೆರವಾಗಿದ್ದಾರೆ. ಹೆಚ್ಚಿನ ಮಟ್ಟದಲ್ಲಿ ಚಾಂದ್ ಬಾಷಾ ಅಣ್ಣನವರು ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಪುರಸಭೆ ಸದಸ್ಯರಾಗಿ ಜನಪರ ಕಾರ್ಯ ಮಾಡುತ್ತಿದ್ದಾರೆ. ಇವರು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯುವ ಜತೆಗೆ ಉನ್ನತ ಸ್ಥಾನಗಳು ಲಭಿಸಲಿ. ಇವರ ಜನ್ದಿನದ ಅಂಗವಾಗಿ ಕೇಕ್ ಕತ್ತರಿಸಿ ಸಿಹಿ ಹಂಚಸಲಾಗಿದೆ. ಚಾಂದ್ ಭಾಷಾ ಅಣ್ಣನವರಿಗೆ ಆಯಸ್ಸು, ಆರೋಗ್ಯವು ಸದಾ ಉಸಿರಾಗಿರಲಿ ಎಂದು ಹಾರೈಯಿಸಿದರು.
ಇದೇ ಸಮಯದಲ್ಲಿ ಚಾಂದ್ ಭಾಷಾ ಅವರಿಗೆ ದೊಡ್ಡ ಹೂವಿನ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಭಟ್ಟ ಪ್ರಸಾದ್, ಲೊಡ್ಡು ಹೊನ್ನೂರವಲಿ, ಮೌಲಾ, ಮುಖಂಡರಾದ ವಿ.ಸತ್ಯಪ್ಪ, ಆಟೋ ರಾಘು, ಡಿಸ್ ಪ್ರಸಾದ್, ಶ್ರೀನಿವಾಸ, ಕಂಬಳಿ ರಾಮಕೃಷ್ಣ, ಮಣ್ಣೂರು ವಿರೇಶ್, ನಾಗರಾಜ, ರಾಣ, ಕಾಸಿ, ಬಸುವ, ಶಂಕ್ರ, ಸದ್ದಾಂ, ಸೋಫಿ, ಶಾಂತಪ್ಪ, ಬಾಬು, ಹುಸೇನಿ, ಉಮೇಶ, ಮಲ್ಲಿ, ಮೋದಿನ್, ಅಕ್ಷಯ, ರಾಕೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.