ವಿಜಯನಗರವಾಣಿ ಸುದ್ದಿ – ರಾಯಚೂರು ಜಿಲ್ಲೆ
ಲಿಂಗಸೂಗೂರು : ಇಂದು ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ತಾಲ್ಲೂಕಿನ ಪ್ರತಿಷ್ಠಿತ ಉಮಾ ಮಹೇಶ್ವರಿಕಾಲೇಜಿನ ಮೂರು ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳು 600ಕ್ಕೆ 600 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.ಕಾಲೇಜಿನ ವಿದ್ಯಾರ್ಥಿಗಳಾದ ಅಮೃತ್ ಸಾಗರ್ ,ನವ್ಯಶ್ರೀ .ಅಕ್ಷಿತಾ ಅವರುಗಳು 600ಕ್ಕೆ 600 ಅಂಕ ಗಳಿಸುವ ಮೂಲಕ ಅದ್ವಿತೀಯ ಸಾಧನೆ ಮಾಡಿದ್ದಾರೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಉಮಾಮಹೇಶ್ವರ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ ಕಾಲೇಜಿನ ಕಾರ್ಯದರ್ಶಿಗಳು ಹಾಗು ಆಡಳಿತಾಧಿಕಾರಿ ವಿನಯ ಕುಮಾರ್ ಗಣಾಚಾರಿ ಸಂಸ್ಥೆಯ ಅಧ್ಯಕ್ಷರು, ಶರಣಬಸವ ಗಣಾಚಾರಿ ಪ್ರಾಂಶುಪಾಲರಾದ ಜಿ ಸುರೇಶ ಸೇರಿದಂತೆ ಪ್ರಮುಖರು ಅಭಿನಂದಿಸಿದ್ದಾರೆ.