ಬಳ್ಳಾರಿ :ಸಂಡೂರ ತಾಲೂಕಿನಾದ್ಯಂತ ಕಳೆದ 3 ದಿನಗಳಿಂದ ಮಳೆ ಬೀಳುತ್ತಿದ್ದು ರೈತರು ಕಷ್ಟಕ್ಕೆ ಸಿಲುಕಿದ್ದಾರೆ, ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಮನೆಗಳು ಬೀಳುತ್ತಿದ್ದು ತಕ್ಷಣ ತಾಲೂಕು ಅಡಳಿತ ರಕ್ಷಣೆಗೆ ಬರಬೇಕಾಗಿದೆ.
ತಾಲೂಕಿನ ಬೊಮ್ಮಘಟ್ಟ ಗ್ರಾಮದ ನಿವಾಸಿಯಾದ ಚಿನ್ನೋಬನಹಳ್ಳಿ ಹನುಮಂತಪ್ಪ ಮಗ ತಿಮ್ಮಪ್ಪ ಇವರ ಮನೆ ಭಾಗಶ: ಬಿದ್ದಿದ್ದು ರೈತರಿಗೆ ಯಾವುದೇ ಅಪಾಯವಾಗಿಲ್ಲ, ಅದರೆ ಮನೆಯಲ್ಲಿ ವಾಸಿಸುವುದು ಕಷ್ಟಸಾಧ್ಯವಾಗಿದ್ದು ಬೇರೆಯವರ ಮನೆಯಲ್ಲಿ ಆಶ್ರಯಪಡೆದುಕೊಳ್ಲುವಂತಹ ಸ್ಥಿತಿ ಉಂಟಾಗಿದ್ದು ತಕ್ಷಣ ಸರ್ಕಾರ ಅವಶ್ಯಕವಾದ ಪರಿಹಾರ ನೀಡುವ ಮೂಲಕ ರಕ್ಷಿಸಬೇಕೆಂದು ಗ್ರಾಮ ಪಂಚಾಯಿತಿಯ ಗ್ರಾಮ ಲೆಕ್ಕಾಧಿಕಾರಿ ಅವರಲ್ಲಿ ಮನವಿ ಮಾಡಿದ್ದಾರೆ.
ತಾಲೂಕಿನ ಸಂಡೂರು ಕೇಂದ್ರದಲ್ಲಿ ಜುಲೈ 16 ರಂದು 1.4 ಮಿ.ಮೀ., ಚೋರುನೂರು ಕೇಂದ್ರದಲ್ಲಿ 1.6 ಮೀ.ಮೀ, 17ರಂದು ಸಂಡೂರು ಕೇಂದ್ರದಲ್ಲಿ 3.6 ಮಿ.ಮೀ., 18 ರಂದು ಚೋರುನೂರು ಕೇಂದ್ರದಲ್ಲಿ 34.00 ಮಿ.ಮೀ., ಸಂಡೂರು ಕೇಂದ್ರದಲ್ಲಿ 7.4 ಮಿ.ಮೀಟರ್ ಮಳೆ ದಾಖಲಾಗಿದ್ದು ಚೋರುನೂರು ಹೋಬಳಿಯ ಬಹುತೇಕ ಹಳ್ಳಿಗಳಲ್ಲಿ ಮನೆಗಳು ಬೀಳುತ್ತಿದ್ದು ರೈತರು ಕಷ್ಟಕ್ಕೆ ಸಿಲುಕಿದ್ದಾರೆ, ಬೆಳೆಗಳಲ್ಲಿ ನೀರು ನಿಂತು ದಿಕ್ಕು ತೋಚದಂತಾಗಿದ್ದಾರೆ.