ಸಿಂಧನೂರು :ಪೋಲಿಸ್ ವಸತಿ ಗೃಹದಲ್ಲಿ ಅರಳಿ ನಿಂತ ಬ್ರಹ್ಮ ಕಮಲ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ:

ರಾಯಚೂರು ಜಿಲ್ಲೆ..

ಸಿಂಧನೂರು:  ಪೋಲಿಸ್ ಸಿಬ್ಬಂದಿ ಯಾದ ಹುಲಿಗಮ್ಮ  ವಸತಿ ಗೃಹದಲ್ಲಿ ಬ್ರಹ್ಮ ಕಮಲ ಪುಷ್ಪಗಳು ಅರಳಿ ನಿಂತಿದ್ದು ಸ್ಥಳೀಯ ನಿವಾಸಿಗಳಲ್ಲಿ ಕೌತುಕ ಮೂಡಿಸಿದೆ. ರಾತ್ರಿ ರಾಣಿಯರು ಎಂದೇ ಪ್ರಸಿದ್ಧವಾಗಿರುವ ಬ್ರಹ್ಮ ಕಮಲ ಪುಷ್ಪವು ರಾತ್ರಿಯ ವೇಳೆಯೇ ಅರಳಿ, ಬೆಳಗಾಗುವುದರೊಳಗೆ ಬಾಡಿ ಹೋಗುವ ಅಪರೂಪದ ಪುಷ್ಪವಾಗಿದೆ. ವರ್ಷಕೊಮ್ಮೆ, ಅದೂ ಕೂಡಾ ರಾತ್ರಿ ಸಮಯದಲ್ಲಿ ಮಾತ್ರಾ ಅರಳುವ ಹೂವುಗಳಲ್ಲಿ ಬ್ರಹ್ಮ ಕಮಲವೂ ಒಂದಾಗಿದೆ. ಹಿಂದೂ ಧರ್ಮದ ನಂಬಿಕೆಯ ಪ್ರಕಾರ ಇದನ್ನು ಬಿಳಿ ಕಮಲವೆಂದೂ ಕರೆಯಲಾಗುತ್ತದೆ.ಈ ಹೂವುಗಳು ಹಂತಹಂತವಾಗಿ ಅರಳುವುದನ್ನು ವೀಕ್ಷಿಸುವುದೇ ಸೋಜಿಗವಾಗಿದ್ದು, ಇದನ್ನು ವೀಕ್ಷಿಸಿದ ಎಲ್ಲರೂ ಸಂತಸದೊಂದಿಗೆ ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ.

 

  

Share and Enjoy !

Shares