ಬಳ್ಳಾರಿ ಪ್ರದೇಶದ ಶ್ರೀಮಂತ ಸಂಸ್ಕøತಿ ಮತ್ತು ಪರಂಪರೆ ಕುರಿತ ಕಾಫಿ ಟೇಬಲ್ ಬುಕ್ ಬಿಡುಗಡೆ

Share and Enjoy !

Shares
Listen to this article

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಸಾಮ್ರಾಜ್ಯದ ಶ್ರೀಮಂತ ಸಂಸ್ಕøತಿ ಮತ್ತು ಪರಂಪರೆಯನ್ನು ಬಿಂಬಿಸುವ ಕಾಫಿ ಟೇಬಲ್ ಬುಕ್‍ನನ್ನು ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲ ಪಾಟಿ ಅವರು ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಗುರುವಾರ ಬಿಡುಗಡೆ ಮಾಡಿದರು.
ಬಳ್ಳಾರಿ ಜಿಲ್ಲಾಡಳಿತ ಮತ್ತು ಸ್ಮಯೋರ್ ಕಂಪನಿಯು ಜಂಟಿಯಾಗಿ ಈ ಕಾಫಿ ಟೇಬಲ್ ಪುಸ್ತಕವನ್ನು ಸಿದ್ದಪಡಿಸಿವೆ. ಬಳ್ಳಾರಿ ಮತ್ತು ವಿಜಯನಗರ ಪ್ರದೇಶದ ಶ್ರೀಮಂತ ಸಂಸ್ಕøತಿಯ ಪರಿಚಯ, ಬ್ರೀಟಿಷ್ ವಸಾಹತುಷಾಹಿ ಇತಿಹಾಸ ಮತ್ತು ಪರಂಪರೆ, ಮಧ್ಯಯುಗದ ಪರಂಪರೆಯ ಇತಿಹಾಸ, ಈ ಪ್ರದೇಶದ ಪ್ರಕೃತಿ, ಸಸ್ಯವರ್ಗ ಮತ್ತು ವಿಶಿಷ್ಟ ಪ್ರಾಣಿ ಸಂಕುಲಗಳ ಪರಿಚಯ, ಹಂಪಿಯ ಶಿಲ್ಪಕಲೆ ಮತ್ತು ಅವಶೇಷಗಳು, ಈ ಭಾಗದ ಜನರು ಮತ್ತು ಸಂಸ್ಕøತಿ ಸೇರಿದಂತೆ ವಿವಿಧ ಪ್ರಮುಖ ವಿಷಯಗಳು ಹಾಗೂ ಅತ್ಯಾಕರ್ಷಕ ಫೋಟೊಗುಚ್ಛಗಳ ಸಂಗ್ರಹವನ್ನು ಈ ಕಾಫಿಟೇಬಲ್ ಬುಕ್ ಹೊಂದಿದೆ.
ದೇಶದ ಖ್ಯಾತ ಛಾಯಾಗ್ರಾಹಕರ ಕ್ಯಾಮೇರಾ ದಲ್ಲಿ ಸೆರೆಯಾಗಿರುವ ಈ ಪ್ರದೇಶದ ಅದ್ಭುತಗಳ ಚಿತ್ರಣ ಹಾಗೂ ಅತ್ಯಾಕರ್ಷಕ ಮಾಹಿತಿ ಇದರಲ್ಲಿದ್ದು, ಮುಖಪು ಟದಲ್ಲಿ ಪ್ರಾಗೈತಿಹಾಸಿಕ ಇತಿಹಾಸ ಸಾರುವ ಸಂಗನಕಲ್ಲು ಗುಡ್ಡ ಹಾಗೂ ಹಿಂಬದಿ ಪುಟದಲ್ಲಿ ವೈಭವದ ಹಂಪಿಯ ಚಿತ್ರಣ ದಾಖಲಿಸಲಾಗಿದೆ.
ಶ್ರೀಮಂತ ಸಂಸ್ಕøತಿ ಮತ್ತಿ ಪರಂಪರೆಯನ್ನು ಹೊಂದಿರುವ ಬಳ್ಳಾರಿ ಪ್ರದೇಶದ ಬಗ್ಗೆ ಕಾಫಿ ಟೇಬಲ್ ಪುಸ್ತಕವನ್ನು ಹೊರತರುವ ಪರಿಕಲ್ಪನೆಯನ್ನು ಹಿಂದಿನ ಡಿಸಿಯಾಗಿದ್ದ ಎಸ್.ಎಸ್.ನಕುಲ್ ಅವರು ಪ್ರಾರಂಭಿಸಿದರು ಮತ್ತು ಸಂಡೂರ್ ಮ್ಯಾಂಗನೀಸ್ ಮತ್ತು ಐರನ್ ಓರೆಸ್ ಲಿಮಿಟೆಡ್ (ಎಸ್‍ಎಂಐಒಆರ್‍ಇ) ಅವರು ಇದನ್ನು ಪ್ರಾಯೋಜಿಸಲು ಒಪ್ಪಿಕೊಂಡಿತ್ತು. ಹಾಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಈ ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದರು.
ಈ ಪುಸ್ತಕವು ಬಳ್ಳಾರಿ ಜನರ ಮತ್ತು ಪ್ರದೇಶದ ಇತಿಹಾಸ, ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ತಿಳಿಸು ತ್ತದೆ. ಎಂ.ವೈ.ಘೋರ್ಪಡೆ ಅವರ ಹೆಜ್ಜೆಗಳನ್ನು ಅನುಸರಿಸಿ, ಅವರ ಮೊಮ್ಮಗ ಬಹೀರ್ಜಿ ಘೋರ್ಪಡೆ ಅವರು ಸಂಡೂರು ಪ್ರದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಉತ್ಸುಕರಾಗಿದ್ದು, ಸಂಡೂರು ಪ್ರದೇಶದ ಕೆಲ ಅದ್ಭುತ ಛಾಯಾಚಿತ್ರಗಳನ್ನು ನೀಡುವ ಮೂಲಕ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಸ್ಮಯೋರ್(ಎಸ್‍ಎಂಐಒ ಆರ್‍ಇ) ಅಧ್ಯಕ್ಷರಾದ ಟಿ.ಆರ್.ರಘುನಂದನ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ್, ಮಹಾನಗರ ಪಾಲಿಕೆಯ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಬಳ್ಳಾರಿ ಉಪವಿಭಾಗದ ಸಹಾಯಕ ಆಯುಕ್ತರಾದ ಡಾ.ಆಕಾಶ್ ಶಂಕರ್, ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಿದ್ರಾ ಮಪ್ಪ ಚಳಕಾಪುರೆ, ಸ್ಮಯೋರ್ ವ್ಯವಸ್ಥಾಪಕ ನಿರ್ದೇಶಕ ಬಹೀರ್ಜಿ ಎ.ಘೋರ್ಪಡೆ, ಸ್ಮಯೋರ್ ನಿರ್ದೇಶಕ (ಗಣಿ) ಎಂ.ಡಿ.ಅಬ್ದುಲ್ ಸಲೀಮ್, ಖ್ಯಾತ ಛಾಯಾಗ್ರಾಹಕರು ಹಾಗೂ ವೈದ್ಯರಾದ ಡಾ.ಎಸ್.ಕೆ.ಅರುಣ,ಹಿರಿಯ ಪತ್ರಕರ್ತ ಎಂ.ಅಹಿರಾಜ್ ಮತ್ತು ಇತರರು ಇದ್ದರು.

Share and Enjoy !

Shares