ವಿಜಯನಗರ ವಾಣಿ ಸುದ್ದಿ : ರಾಜ್ಯ ರಾಜಕೀಯ
ಬಳ್ಳಾರಿ.ಜು.೨೨:- ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡ್ಯೂರಪ್ಪರನ್ನು ಮುಖ್ಯಮಂತ್ರಿ ಗಾದಿಯಿಂದಕೆಳಗಿಳಿಸಬೇಕೆನ್ನುವ ಚರ್ಚೆಗಳು ನಡೆಯುತ್ತಿದ್ದು,
ದೆಹಲಿಯಲ್ಲಿ ಹೈಕಮಾಂಡ್ ಈ ಬಗ್ಗೆ ಕಾದುನೋಡುವ ತಂತ್ರಅನುಸರಿಸುತ್ತಿದ್ದು, ಯಡಿಯೂರಪ್ಪನವರ ಸಂಪುಟದಲ್ಲಿರುವ ಕೆಲವು ಸಚಿವರು ಒಳಗೊಳಗೆ ಮುಖ್ಯಮಂತ್ರಿಗಳನ್ನು
ಬದಲಾವಣೆ ಮಾಡಬೇಕೆಂದು ತಂತ್ರ ಹೆಣೆಯುತ್ತಿದ್ದಾರೆ.ಮತ್ತೊಂದು ಕಡೆ ಕರ್ನಾಟಕ ಪ್ರತಿಷ್ಠಿತ ಮಠಗಳ
ಮಠಾಧೀಶರು ಯಡಿಯೂರಪ್ಪನವರ ಪರ ನಿಂತಿದ್ದು,ಯಾವುದೇ ಕಾರಣಕ್ಕೂ ಯಡಿಯೂರಪ್ಪನವರನ್ನು ಬದಲಾವಣೆ ಮಾಡಬಾರದೆಂದು ಪಟ್ಟು ಹಿಡಿದಿದ್ದಾರೆ.
ಆದರೆ ಯಡಿಯೂರಪ್ಪನವರನ್ನು ಬದಲಾವಣೆ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಯುವುದಿಲ್ಲ, ಮುಂದೆಯೂ ಈ ಪಕ್ಷ
ಅಧಿಕಾರಕ್ಕೆ ಬರುವುದಿಲ್ಲವೆಂದು ಬಳ್ಳಾರಿ ಜಿಲ್ಲೆ ಸ್ವಾಮೀಜಿಯೊಬ್ಬರು ಭವಿಷ್ಯ ನುಡಿದ್ದಿದ್ದಾರೆ. ಅವರು ನುಡಿದಿರುವಭ ಸಾರಂಶ ಇಲ್ಲಿದೆ.
ಬಳ್ಳಾರಿ ತಾಲೂಕಿನ ಡಿ.ನಾಗೇನಹಳ್ಳಿ ಗ್ರಾಮದ ಮರುಳಸಿದ್ಧಾಶ್ರಮದ ಶ್ರೀ ನಂಜುಂಡೇಶ್ವರ ಶ್ರೀಗಳು ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರನ್ನು ಸಿ.ಎಂ.ಗಾದಿಯಿಂದ ಕೆಳಗಿಳಿಸುವ ವಿಚಾರವಾಗಿ ಭವಿಷ್ಯ ನುಡಿದಿದ್ದು,
ಯಡಿಯೂರಪ್ಪರವರನ್ನು ಸಿ.ಎಂ.ಕುರ್ಚಿಯಿಂದ ಕೆಳಗಿಳಿಸಿದರೆ ರಾಜ್ಯ ಬಿ.ಜೆ.ಪಿ. ಸರ್ಕಾರವು ಅಳಿದುಹೋಗಿ ಮುಂದೆಂದು ಬಿಜೆಪಿ ಸರ್ಕಾರವು ರಚನೆಯಾಗುವುದಿಲ್ಲ,
ಕಾಂಗ್ರೇಸ್‌ನಲ್ಲಿ ಮಾಜಿಮು ಸಿದ್ದರಾಮಯ್ಯ ಅವರನ್ನು ಕಾಂಗ್ರೇಸ್ ಪಕ್ಷವುದೂರ ಇಟ್ಟರೆ ಕಾಂಗ್ರೇಸ್ ಪಕ್ಷಕ್ಕೆ ರಾಜ್ಯದಲ್ಲಿಭವಿಷ್ಯವಿಲ್ಲವೆಂದು ಹೇಳಿದ್ದಾರೆ.
ಈ ಹಿಂದೆಯು ಗ್ರಾಮಪಂಚಾಯಿತಿ ಮತ್ತು ಸೀಮಾಂಧ್ರಪ್ರದೇಶದ ಚುನಾವಣೆಯಲ್ಲಿ ನಿಂತ ಅಭ್ಯರ್ಥಿಗಳ ಮೊದಲ
ಹೆಸರಿನ ಮೇಲೆ ಶ್ರೀಗಳು ಭವಿಷ್ಯ ನುಡಿದಿದ್ದರು. ಈ ಬಾರಿರ ಪಕ್ಷಗಳ ಭವಿಷ್ಯ ನುಡಿದಿದ್ದು, ಶ್ರೀಗಳಭವಿಷ್ಯವಾಣಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.