ವಿಜಯನಗರ ವಾಣಿ
ಚಂದ್ರಶೇಖರ ಆಜಾದ್ ಅಥವಾ ಆಜಾದ್ ಎಂಬ ಹೆಸರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಜರಾಮರ. ಭಗತ್ ಸಿಂಗ್ ರನ್ನು ಮಾರ್ಗದರ್ಶಕರನ್ನಾಗಿಸಿಕೊಂಡು ಕ್ರಾಂತಿಕಾರಿಯಾಗಿ ಸ್ವಾತಂತ್ರ್ಯ ಸಂಗ್ರಾಮ ನಡೆಸಿದ ಚಂದ್ರಶೇಖರ ಸೀತಾರಮ್ ತಿವಾರಿ ಅಲಿಯಾಸ್ ಆಜಾದ್ ಅವರ ಜನ್ಮ ಜಯಂತಿ ದಿನವನ್ನು ನೆನೆಯಲಾಗುತ್ತಿದೆ. ಸಣ್ಣ ಪ್ರಾಯದಲ್ಲೇ ದೇಶ ಪ್ರೇಮವನ್ನು ಇವರು ಮೈಗೂಡಿಸಿಕೊಂಡಿದ್ದರು.
ಇನ್ನು ಮತ್ತೊಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬಾಲ ಗಂಗಾಧರ ತಿಲಕ್ ಅವರ ಜಯಂತಿ ಕೂಡ ಹೌದು. ಸ್ವಾತಂತ್ರ್ಯ ಹಾಗೂ ಸಮಾಜದಲ್ಲಿನ ಅನೇಕ ತೊಡಕುಗಳನ್ನು ನಿರ್ಮೂಲನೆ ಮಾಡಿದ ಕೀರ್ತಿ ತಿಲಕರಿಗೆ ಸೇರುತ್ತದೆ. ಈ ಹಿನ್ನೆಲೆ ಅಜಾದ್ ಹಾಗೂ ತಿಲಕರ ಜನ್ಮ ಜಯಂತಿಗೆ ಪ್ರಮುಖ ರಾಜಕಾರಣಿಗಳು ನೆನೆದು ಗೌರವ ಸಲ್ಲಿಸಿದರು.
ಈ ಸಬಂಧ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ದೇಶದ ಸ್ವಾತಂತ್ರ್ಯ ಚಳವಳಿಗೆ ತಿಲಕ್ ಮತ್ತು ಆಜಾದ್ ನೀಡಿದ ಕೊಡುಗೆಗಳನ್ನು ಪಿಎಂ ಮೋದಿ ನೆನಪಿಸಿಕೊಂಡರು.ಬಾಲ್ ಗಂಗಾಧರ್ ತಿಲಕ್ ಅವರು ಭಾರತೀಯ ಮೌಲ್ಯಗಳು ಮತ್ತು ನೀತಿಗಳನ್ನು ದೃಢವಾಗಿ ನಂಬಿದ್ದರು, ಶಿಕ್ಷಣ ಮತ್ತು ಮಹಿಳಾ ಸಬಲೀಕರಣದ ಬಗ್ಗೆ ತಿಲಕರ ದೃಷ್ಟಿಕೋನಗಳು ಹಲವಾರು ಜನರನ್ನು ಇಲ್ಲಿಯವರೆಗೆ ಪ್ರೇರೇಪಿಸುತ್ತಲೇ ಇವೆ ಎಂದರು. ಇನ್ನು ಇದೆ ವೇಳೆ ಪ್ರಧಾನಿ ಮೋದಿ ಅಜಾದ್ ಅವರನ್ನು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಎಂದು ಸಂಬೋಧಿಸಿದರು, ಅಲ್ಲದೇ ಅವರನ್ನು ಭಾರತ ಮಾತೆಯ ಶೂರ ಮಗ ಮತ್ತು ಗಮನಾರ್ಹ ವ್ಯಕ್ತಿ ಎಂದು ಶ್ಲಾಘಿಸಿದ್ದಾರೆ.